ಕರ್ನಾಟಕ

karnataka

ETV Bharat / state

ರಮೇಶ್ ಸೂಕ್ಷ್ಮ ಸ್ವಭಾವದ ಹುಡುಗ: ಸಚಿವ ಹೆಚ್​.ನಾಗೇಶ್ - ಕೋಲಾರ

ಐಟಿ ದಾಳಿಗೆ ಹೆದರಿ ಮಾಜಿ ಡಿಸಿಎಂ ಪರಮೇಶ್ವರ್ ಅವರ ಆಪ್ತಸಹಾಯಕ ರಮೇಶ್ ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು ಎಂದು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.

ಸಚಿವ ಎಚ್​.ನಾಗೇಶ್

By

Published : Oct 13, 2019, 12:58 PM IST

ಕೋಲಾರ: ಮಾಜಿ ಡಿಸಿಎಂ ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆಗೆ ಕಾರಣ ನನಗೆ ಗೊತ್ತಿಲ್ಲ, ಆದರೆ ರಮೇಶ್ ಸೂಕ್ಷ್ಮ ಸ್ವಭಾವದ ಹುಡುಗ ಎಂದು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಹೆಚ್​.ನಾಗೇಶ್ ಹೇಳಿದ್ದಾರೆ.

ಸಚಿವ ಹೆಚ್​.ನಾಗೇಶ್

ರಮೇಶ್ ಒಳ್ಳೆಯ ಹುಡುಗ, ಎಸ್.ಎಸ್.ಎಲ್.ಸಿ ಓದಿದ್ದರೂ ಸಹ ಕಂಪ್ಯೂಟರ್‌ನಲ್ಲಿ ಎಕ್ಸ್​ಪರ್ಟ್​ ಇದ್ದ ಎಂದು ಕೋಲಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ಹೇಳಿದ್ದಾರೆ.

ರಮೇಶ್ ಎಲ್ಲಾ ವಿಷಯಗಳನ್ನು ಗೌಪ್ಯವಾಗಿ ಕಾಪಾಡಿಕೊಳ್ಳುತ್ತಿದ್ದ. ಅವನಿಗಿನ್ನೂ ಎಳೆಯ ಮಕ್ಕಳಿದ್ದು, ಅಯ್ಯೋ ಎನಿಸುತ್ತದೆ. ಐಟಿ ದಾಳಿ ಎಂದ ಕೂಡಲೇ ಹೆದರಿ ಹೀಗೆ ಮಾಡಿಕೊಳ್ಳಬಾರದಿತ್ತು. ಕೆಲವು ಸೂಕ್ಷ್ಮ ಸ್ವಭಾವದವರು ಈ ರೀತಿ ಮಾಡಿಕೊಳ್ಳತ್ತಾರೆ ಎಂದರು.

ಒಂದು ಪಕ್ಷ ನಾಯಕರ ಮೇಲೆ ಐಟಿ ದಾಳಿ ಆದಾಗ ಇನ್ನೊಂದು ಪಕ್ಷದ ನಾಯಕರು ಆರೋಪ ಮಾಡುವುದು ಸಾಮಾನ್ಯ. ಇವೆಲ್ಲವೂ ಸ್ವಾಭಾವಿಕ. ಇನ್ನು ರಾಜಕೀಯದಲ್ಲಿ ಯಾರನ್ನೂ ನಂಬಬೇಡಿ, ಎಲ್ಲರೂ ಒಂದೇ. ಶತ್ರುಗಳು ಮಿತ್ರರು ಯಾರೂ ಇಲ್ಲ, ಈಗ ಕಿತ್ತಾಡುತ್ತಾರೆ ನಾಳೆ ಒಂದಾಗುತ್ತಾರೆ, ಕಲಾಪದಲ್ಲಿ ಕಾದಾಡಿ, ಹೊರಗಡೆ ಬಂದು ಅಣ್ಣ, ತಮ್ಮ ಎನ್ನುತ್ತಾರೆ ಎಂದು ತಿಳಿಸಿದರು.

ABOUT THE AUTHOR

...view details