ಕೋಲಾರ: ನನ್ನ ರಾಜಕೀಯ ನಿವೃತ್ತಿ ಕೇವಲ ವದಂತಿ ಅಷ್ಟೇ. ಯಾವುದೇ ಹೇಳಿಕೆ ಇಲ್ಲದೆ, ದಾಖಲೆ ಇಲ್ಲದೆ ನಮಗೆ ಮುಜುಗರ ತರುವ ಕೆಲಸ ಮಾಡಬೇಡಿ ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ರು.
ನನ್ನ ರಾಜಕೀಯ ನಿವೃತ್ತಿ ಕೇವಲ ವದಂತಿ ಅಷ್ಟೇ: ಮಾಜಿ ಸ್ಪೀಕರ್ ರಮೇಶ್ ಕುಮಾರ್ - ರಮೇಶ್ ಕುಮಾರ್ ಪಾಲಿಟಿಕ್ಸ್
16:53 December 08
ನನ್ನ ರಾಜಕೀಯ ನಿವೃತ್ತಿ ಬಗ್ಗೆ ಎಲ್ಲೂ ಹೇಳಿಕೆ ಕೊಟ್ಟಿಲ್ಲ
ಕೋಲಾರ ತಾಲೂಕಿನ ಜನ್ನಘಟ್ಟ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮ್ಮ ರಾಜಕೀಯ ನಿವೃತ್ತಿಯ ವದಂತಿ ಕುರಿತು ಬೇಸರ ವ್ಯಕ್ತಪಡಿಸಿ, ನನ್ನ ರಾಜಕೀಯ ನಿವೃತ್ತಿ ಬಗ್ಗೆ ಎಲ್ಲೂ ಹೇಳಿಕೆ ಕೊಟ್ಟಿಲ್ಲ. ಸಭೆ ಸಮಾರಂಭ ಮಾಡಿ ಹೇಳಿಲ್ಲ. ಹೀಗಿರುವಾಗ ದಾಖಲೆಯಿಲ್ಲದೆ ಈ ರೀತಿ ವದಂತಿ ಹಬ್ಬಿಸುವುದು ಸರಿಯೇ ಎಂದು ಪ್ರಶ್ನಿಸಿದರು.
ಜನರು ನನ್ನ ಎಲ್ಲಾ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದಾರೆ. ಅವರಿಗೆ ಜವಾಬ್ದಾರಿ ಕೊಟ್ಟು ಆಮೇಲೆ ನಿವೃತ್ತಿಯಾಗುವೆ. ಏಕಾಏಕಿ ನಿವೃತ್ತಿಯಾಗಲು ನಾನು ಡಿಕ್ಟೇಟರ್ ಅಲ್ಲವೆಂದರು.
ಇನ್ನು ನಿವೃತ್ತಿಯಾಗಲು ಫ್ರೀಯಾಗಿರುವ ಮನುಷ್ಯ ನಾನಲ್ಲ. ಜನರ ಪ್ರೀತಿಯ ಬಂಧನದಲ್ಲಿದ್ದೇನೆ. ಹೀಗೆ ಮಾಡಿದ್ರೆ ಮನಸ್ಸಿಗೆ ನೋವಾಗುತ್ತೆ ಎಂದು ಹೇಳಿದರು. ಮಾನವಂತರು ಯಾರೂ ರಾಜಕಾರಣ ಮಾಡಬಾರದೇ ಎಂದು ಮಾಧ್ಯಮಗಳಿಗೆ ಪ್ರಶ್ನಿಸಿದರು.
ನಾನು ದೇವರಾಜ ಅರಸು ಕಾಲದಿಂದ ಸಕ್ರಿಯವಾಗಿದ್ದೇನೆ, ಗೌರವವಾಗಿ ಬದುಕುತ್ತಿದ್ದೇನೆ. ಆದ್ರೆ ನೀವು ನನ್ನ ಹರಿದು ತೋರಣ ಕಟ್ಟಿದ್ದೀರ ಎಂದರು. ನಾನು ಇನ್ನೂ ಸಾರ್ವಜನಿಕ ಜೀವನದಲ್ಲಿ ಇರುವುದರಿಂದ ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲವೆಂದರು.