ಕೋಲಾರ: ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದ ರೈತ ಸಂಘದ ಕಾರ್ಯಕರ್ತೆಗೆ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಅಸಂಬದ್ಧ ಪದಗಳನ್ನು ಬಳಕೆ ಮಾಡಿದ್ದರು. ಈ ಕುರಿತಂತೆ ರೈತ ಸಂಘದ ಕಾರ್ಯಕರ್ತೆ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ.
ಸಚಿವ ಮಾಧುಸ್ವಾಮಿ ಹೇಳಿಕೆಗೆ ರೈತ ಮುಖಂಡೆ ಪ್ರತಿಕ್ರಿಯೆ - ಮಾಧುಸ್ವಾಮಿ ಹೇಳಿಕೆಗೆ ರೈತ ಮುಖಂಡೆ ಪ್ರತಿಕ್ರಿಯೆ
ನಿನ್ನೆ ಕೋಲಾರಕ್ಕೆ ನಿನ್ನೆ ಸಣ್ಣ ನೀರಾವರಿ ಹಾಗೂ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಭೇಟಿ ನೀಡಿದ್ದ ವೇಳೆ ರೈತ ಸಂಘದ ಮುಖಂಡೆ ಹಾಗೂ ಸಚಿವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಕುರಿತಂತೆ ರೈತ ಸಂಘದ ಮುಖಂಡೆ ಪ್ರತಿಕ್ರಿಯೆ ನೀಡಿದ್ದಾರೆ.
ಕೋಲಾರಕ್ಕೆ ನಿನ್ನೆ ಸಣ್ಣ ನೀರಾವರಿ ಹಾಗೂ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಭೇಟಿ ನೀಡಿದ್ರು. ಅಂತರ್ಜಲ ವೃದ್ಧಿಗಾಗಿ ಬೆಂಗಳೂರು ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಕೆರೆಗಳಿಗೆ ತುಂಬಿಸುವ ಕೆಸಿ ವ್ಯಾಲಿ ಯೋಜನೆಯ ಪರಿಶೀಲನೆಗಾಗಿ ತಾಲೂಕಿನ ಎಸ್.ಅಗ್ರಹಾರ ಕೆರೆ ಸೇರಿದಂತೆ ಹಲವೆಡೆ ಭೇಟಿ ನೀಡಿದ್ರು. ಎಸ್.ಅಗ್ರಹಾರ ಕೆರೆ ಬಳಿ ಬಂದ ಸಚಿವ ಮಾಧುಸ್ವಾಮಿಯವರಿಗೆ ರೈತ ಸಂಘದ ಕಾರ್ಯಕರ್ತೆಯರು ಕೆರೆಗಳಿಗೆ ನೀರು ಹರಿಸುವ ಮುನ್ನ ಕೆರೆಗಳ ಒತ್ತುವರಿ ತೆರವುಗೊಳಿಸಿ ಎಂದು ಮನವಿ ಮಾಡಿದ್ದೆವು. ನಂತರ ಕೆರೆಗಳ ಒತ್ತುವರಿಗೆ ನಿಮ್ಮ ಸರ್ಕಾರದಿಂದಲೇ ಖಾತೆ, ಪಹಣಿ ಮಾಡಿಕೊಡುತ್ತಿದ್ದಾರೆ ಎಂದು ಹೇಳಿದ ನನ್ನ ಮಾತಿಗೆ ಕೆಂಡಾಮಂಡಲರಾದ ಮಾಧುಸ್ವಾಮಿ, ನಾನು ಸರಿ ಇಲ್ಲ, ಕೆಟ್ಟ ಮನುಷ್ಯ, ಬಾಯಿ ಮುಚ್ಚು ರಾಸ್ಕಲ್ ಎಂದು ಆವಾಜ್ ಹಾಕುವ ಮೂಲಕ ಅಸಂಬದ್ಧ ಪದಗಳನ್ನು ಬಳಸಿದ್ರು ಎಂದು ರೈತ ಸಂಘದ ಮುಖಂಡೆ ನಳಿನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.