ಕೋಲಾರ: ಜಿಲ್ಲೆಯಲ್ಲಿ ಜುಲೈ ತಿಂಗಳು ಕಳೆದರೂ ಸಾಕಷ್ಟು ಮಳೆಯಾಗದ ಪರಿಣಾಮ ರೈತರು ಒಣ ಭೂಮಿಯಲ್ಲೇ ಬಿತ್ತನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೋಲಾರದಲ್ಲಿ ತುಂತುರು ಮಳೆ: ಒಣಗಿ ಹೋಗುತ್ತಿದ್ದ ಬೆಳೆಗೆ ಕೊಂಚ ಜೀವಕಳೆ! - ಭೀಕರ ಬರ
ಬರಕ್ಕೆ ತುತ್ತಾಗಿರುವ ಜಿಲ್ಲೆಯಲ್ಲಿ ಎರಡು ಮೂರು ದಿನಗಳಿಂದ ತುಂತುರು ಮಳೆ ಸುರಿದಿದ್ದು, ಪರಿಣಾಮ ಒಣಗುವ ಹಂತ ತಲುಪಿದ್ದ ಹೊಲಗಳಲ್ಲಿ ಒಂದಷ್ಟು ಜೀವಕಳೆ ಬಂದಿದೆ.
ಹೌದು, ಕಳೆದ ಮೂರು ನಾಲ್ಕು ವರ್ಷಗಳಿಂದ ಮೇಲಿಂದ ಮೇಲೆ ಭೀಕರ ಬರಕ್ಕೆ ತುತ್ತಾಗಿರುವ ಕೋಲಾರ ಜಿಲ್ಲೆಯ ಜನರು ಈ ವರ್ಷವೂ ಬರಕ್ಕೆ ತುತ್ತಾಗಿದ್ದಾರೆ. ಬರದಿಂದ ತತ್ತರಿಸಿ ಹೋಗಿರುವ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಬಿದ್ದ ತುಂತುರು ಮಳೆಯಿಂದ ಬೆಳೆಗಳಿಗೆ ಕೊಂಚ ಜೀವ ಬಂದಿದೆ.
ಹೀಗೆ ತುಂತುರು ಮಳೆಯಾದ್ರು ಮುಂದುವರೆದರೆ ಈ ವರ್ಷದ ಬೆಳೆ ಇಲ್ಲವಾದ್ರು ಕನಿಷ್ಠ ಜನ-ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿಗಾದ್ರು ಅನುಕೂಲವಾಗುತ್ತದೆ ಅನ್ನೋದು ರೈತರ ಲೆಕ್ಕಾಚಾರ. ಇನ್ನು ಮುಂದಿನ ಹತ್ತು ಹದಿನೈದು ದಿನಗಳಲ್ಲಿ ಒಳ್ಳೆಯ ಮಳೆಯಾದ್ರೆ ರೈತರ ನಿರೀಕ್ಷೆಯಂತೆ ಒಂದಷ್ಟು ಬೆಳೆಗಳು ರೈತರ ಕೈ ಹಿಡಿಯುತ್ತವೆ. ಇಲ್ಲವಾದಲ್ಲಿ ರೈತರ ಪರಿಸ್ಥಿತಿ ಹೇಳತೀರದಾಗುತ್ತದೆ. ಹಾಗಾಗಿ ಸರ್ಕಾರ ನಮ್ಮ ಸಂಕಷ್ಟಕ್ಕೆ ನೆರವು ನೀಡಬೇಕು ಅನ್ನೋದು ರೈತರ ಅಳಲಾಗಿದೆ.