ETV Bharat Karnataka

ಕರ್ನಾಟಕ

karnataka

ETV Bharat / state

ಜೆಡಿಎಸ್​​​ ಶಾಸಕನನ್ನು ಸತ್ತ ನಾಯಿ ಹೋಲಿಸಿದ ವರ್ತೂರ್​​ ಪ್ರಕಾಶ್​​​ - ಜೆಡಿಎಸ್ ಶಾಸಕ ಶ್ರೀನಿವಾಸಗೌಡ

ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಅವರನ್ನ ಮಾಜಿ ಶಾಸಕ ವರ್ತೂರ್ ಪ್ರಕಾಶ್ ಸತ್ತ ನಾಯಿಗೆ ಹೋಲಿಸಿದ ಪ್ರಸಂಗ ಇಂದು ಕೋಲಾರದಲ್ಲಿ ನಡೆದಿದೆ.

R vartur prakash
ಆರ್.ವರ್ತೂರ್ ಪ್ರಕಾಶ್
author img

By

Published : Dec 24, 2019, 9:43 PM IST

ಕೋಲಾರ: ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಅವರನ್ನ ಮಾಜಿ ಶಾಸಕ ವರ್ತೂರ್ ಪ್ರಕಾಶ್ ಸತ್ತ ನಾಯಿಗೆ ಹೋಲಿಸಿದ ಪ್ರಸಂಗ ಇಂದು ಕೋಲಾರದಲ್ಲಿ ನಡೆದಿದೆ.

ಮಾಜಿ ಶಾಸಕ ವರ್ತೂರ್ ಪ್ರಕಾಶ್

ಇಂದು ಕೋಲಾರದಲ್ಲಿ ಮಾಜಿ ಶಾಸಕ ವರ್ತೂರ್ ಪ್ರಕಾಶ್ ತಮ್ಮ ಹುಟ್ಟುಹಬ್ಬದ ಹಿನ್ನೆಲೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ವೇಳೆ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಇವರ ಕೈಯಲ್ಲಿ ಒಬ್ಬ ಪಿಡಿಒ ಅಥವಾ ಒಬ್ಬ ಪೊಲೀಸ್ ಪೇದೆಯನ್ನ ವರ್ಗಾವಣೆ ಮಾಡುವುದಕ್ಕೆ ಆಗುವುದಿಲ್ಲ. ಇನ್ನು ಹಿಂದಿನ ಚುನಾವಣೆಯಲ್ಲಿ ಇವರು ಯಾರ ಯಾರ ಬಳಿ ಹಣ ತೆಗೆದುಕೊಂಡು ಚುನಾವಣೆ ಮಾಡಿದ್ದಾರೆ ಎಂದು ಗೊತ್ತಿದೆ. ಚುನಾವಣೆಯಲ್ಲಿ ಖರ್ಚು ಮಾಡಿರುವುದನ್ನ ಆಲೂಗಡ್ಡೆ ಮಾರಿ ತೀರುಸುತ್ತಾರಾ ಎಂದು ಪ್ರಶ್ನಿಸಿದರು. ಇನ್ನು ಮತ್ತೆ ಯಾವ ಸಂದರ್ಭದಲ್ಲಾದ್ರೂ ಚುನಾವಣೆ ಬರಬಹುದು. ನೀವೆಲ್ಲಾ ಸಿದ್ಧರಾಗಿ ಎಂದು ತಮ್ಮ ಅಭಿಮಾನಿಗಳಿಗೆ ಕರೆ ನೀಡಿದರು.

ABOUT THE AUTHOR

...view details