ಕೋಲಾರ : ರಾಜ್ಯದಲ್ಲಿ ಬಜೆಟ್‌ನ ಕುರಿತು ಚರ್ಚೆಗಳು ನಡೆಯುತ್ತಿರುವ ಪರಿಣಾಮ ರಾಜಕೀಯ ಬೆಳವಣಿಗೆಗಳು ಏನಿದ್ದರೂ ಜೂನ್ 30ರ ನಂತರ ನಡೆಯಲಿವೆ ಎಂದು ಮಾಜಿ ಸಚಿವ ಆರ್.ಶಂಕರ್ ತಿಳಿಸಿದ್ದಾರೆ.
ನಗರದಲ್ಲಿ ನಡೆದ ಕುರುಬ ಸಮುದಾಯದ ಸಭೆಗೆ ಆಗಮಿಸಿದ ವೇಳೆ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುವಲ್ಲಿ ನಾನೂ ಒಬ್ಬ ಕಾರಣಕರ್ತ. ಹಾಗಾಗಿ ಜೂನ್ 30ರ ನಂತರ ಎಂಎಲ್‌ಸಿ ಮಾಡಿ ಮಂತ್ರಿ ಸ್ಥಾನ ನೀಡುವ ಭರವಸೆಯನ್ನ ಸಿಎಂ ಅವರೇ ನೀಡಿದ್ದಾರೆ ಎಂದರು.
ಮಂತ್ರಿ ಸ್ಥಾನ ಕುರಿತು ಆರ್. ಶಂಕರ್ ಪ್ರತಿಕ್ರಿಯೆ ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿ ಸ್ಥಾನದಲ್ಲಿರೋದ್ರಿಂದ ಆರು ತಿಂಗಳಲ್ಲಿ ಅವರು ಆಯ್ಕೆಯಾಗಬೇಕಿತ್ತು. ಎಂಎಲ್‌ಸಿ ಸ್ಥಾನ ಒಂದು ಮಾತ್ರ ಖಾಲಿ ಇತ್ತು. ಹಾಗಾಗಿ ಪಕ್ಷದ ನಿರ್ಧಾರದಿಂದ ಲಕ್ಷ್ಮಣ ಸವದಿಗೆ ಎಂಎಲ್‌ಸಿ ಮಾಡಿ ಸಚಿವರನ್ನಾಗಿ ಮಾಡಿದ್ದಾರೆ ಎಂದ್ರು.
ಯಡಿಯೂರಪ್ಪ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಸರ್ಕಾರ ಸುಭದ್ರವಾಗಿದೆ. ಮುಂದಿನ ಮೂರು ವರ್ಷಗಳ ಕಾಲ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಗಳಾಗಿ ಮುಂದುವರೆಯುತ್ತಾರೆ ಎಂದು ತಿಳಿಸಿದ್ರು.