ಕರ್ನಾಟಕ

karnataka

ETV Bharat / state

ಕ್ವಾರಂಟೈನ್​ ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಟ; ಆತಂಕದಲ್ಲಿ ಜನ - ಆತಂಕದಲ್ಲಿ ಜನರು

ಜಿಲ್ಲೆಯಲ್ಲಿ ಕೈಗಾರಿಕೆಗಳ ಮಾಲೀಕರು ಹೊರ ರಾಜ್ಯಗಳಿಂದ ಕಾರ್ಮಿಕರನ್ನು ಕರೆಸಿಕೊಂಡು ಜನರನ್ನು ಮತ್ತಷ್ಟು ಆತಂಕಕ್ಕೆ ಒಳಗಾಗುವಂತೆ ಮಾಡುತ್ತಿದ್ದಾರೆ. ಕಳೆದ ರಾತ್ರಿ ಒಡಿಶಾದಿಂದ 32 ಕಾರ್ಮಿಕರು ನರಸಾಪುರಕ್ಕೆ ಬಂದಿದ್ದಾರೆ..

quarantine-violation-in-kolar
ಕ್ವಾರಂಟೈನ್​​​​ ಉಲ್ಲಂಘನೆ

By

Published : Jul 4, 2020, 3:46 PM IST

ಕೋಲಾರ :ಕ್ವಾರಂಟೈನ್​​​ನಲ್ಲಿ ಇರಬೇಕಾದ ವ್ಯಕ್ತಿಯೊಬ್ಬರು ಬೇಕಾಬಿಟ್ಟಿ ಓಡಾಡುತ್ತಿದ್ದು, ಕೋಲಾರ ತಾಲೂಕಿನ ನರಸಾಪುರ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ನರಸಾಪುರ ಕೈಗಾರಿಕಾ ಪ್ರದೇಶದ ಕಂಪನಿಯೊಂದರಲ್ಲಿ ಕೆಲಸ ಮಾಡಲು ಬಂದಿದ್ದ ಉತ್ತರಪ್ರದೇಶದ ವ್ಯಕ್ತಿಗೆ ಸೀಲ್​​ ಹಾಕಿ ಕ್ವಾರಂಟೈನ್ ಮಾಡಲಾಗಿತ್ತು. ಆದರೀತ ಕ್ವಾರಂಟೈನ್​ ಉಲ್ಲಂಘಿಸಿ ಎಲ್ದೆಂದರಲ್ಲಿ ಓಡಾಡುವ ಮೂಲಕ ಆತಂಕಕ್ಕೀಡು ಮಾಡಿದ್ದಾನೆ.

ಇಂದು ಮುಂಜಾನೆ ಟೀ ಅಂಗಡಿ ಬಳಿ ಕಾಣಿಸಿಕೊಂಡ ಈತನನ್ನು ಸ್ಥಳೀಯರು ವಿಚಾರಿಸಿದ್ದು, ಆತನ ಕೈಮೇಲೆ ಕ್ವಾರಂಟೈನ್​ ಸೀಲ್ ಇರುವುದು ಕಂಡು ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಈ ವಿಷಯ ಮುಟ್ಟಿಸಿದ್ದಾರೆ.

ಕ್ವಾರಂಟೈನ್​ ಉಲ್ಲಂಘಿಸಿ ಓಡಾಡಿದ ವ್ಯಕ್ತಿ

ಜಿಲ್ಲೆಯಲ್ಲಿ ಕೈಗಾರಿಕೆಗಳ ಮಾಲೀಕರು ಹೊರ ರಾಜ್ಯಗಳಿಂದ ಕಾರ್ಮಿಕರನ್ನು ಕರೆಸಿಕೊಂಡು ಜನರನ್ನು ಮತ್ತಷ್ಟು ಆತಂಕಕ್ಕೆ ಒಳಗಾಗುವಂತೆ ಮಾಡುತ್ತಿದ್ದಾರೆ. ಕಳೆದ ರಾತ್ರಿ ಒಡಿಶಾದಿಂದ 32 ಕಾರ್ಮಿಕರು ನರಸಾಪುರಕ್ಕೆ ಬಂದಿದ್ದಾರೆ. ಹಾಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

ABOUT THE AUTHOR

...view details