ಕೋಲಾರ:ಪುನೀತ್ ಅಭಿನಯದ ಜೇಮ್ಸ್ ಸಿನಿಮಾ ದೇಶಾದ್ಯಂತ ಇಂದು ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಎಲ್ಲೆಡೆ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಆದರೆ, ಅಭಿಮಾನಿಯೊಬ್ಬ ಸಿನಿಮಾ ಟಿಕೆಟ್ ಸಿಗದೆ ಕಣ್ಣೀರು ಹಾಕಿರುವ ಘಟನೆಯೂ ನಡೆದಿದೆ.
ನಗರದ ನಾರಾಯಣಿ ಚಿತ್ರಮಂದಿರದ ಮುಂಭಾಗ ಅಪ್ಪು ಫೋಟೋಗೆ ಕೈ ಮುಗಿದು ಅಭಿಮಾನಿ ಕಣ್ಣೀರು ಹಾಕಿದ್ದಾನೆ. ಶ್ರೀನಿವಾಸ್ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಇಂದು ಕೂಲಿ ಕೆಲಸ ಬಿಟ್ಟು ನೆಚ್ಚಿನ ನಟನ ಸಿನಿಮಾ ನೋಡಬೇಕೆಂದು ಆಗಮಿಸಿದ್ದರು. ಆದರೆ ಆನ್ಲೈನ್ನಲ್ಲಿ ಎಲ್ಲ ಟಿಕೆಟ್ಗಳು ಸೋಲ್ಡ್ ಔಟ್ ಆಗಿದ್ದವು. ಇದರಿಂದ ಟಿಕೆಟ್ ಸಿಗದೇ ಕಣ್ಣೀರಿಟ್ಟು ಹೊರ ನಡೆದರು.
ಚಿತ್ರಮಂದಿರಗಳ ಮುಂದೆ ಸಂಭ್ರಮಾಚರಣೆ:ಇಂದು ಪುನೀತ್ ಅಭಿಮಾನಿಗಳಲ್ಲಿ ಸಂಭ್ರಮ ಮಾಡಿದ್ದು, ಅಪ್ಪು ಕೊನೆಯ ಚಿತ್ರ ಜೇಮ್ಸ್ ಕಣ್ತುಂಬಿಕೊಳ್ಳಲು ಶಾರದಾ ಹಾಗೂ ನಾರಾಯಣಿ ಚಿತ್ರಮಂದಿರಗಳಿಗೆ ಆಗಮಿಸುತ್ತಿದ್ದಾರೆ. ಚಿತ್ರಮಂದಿರಗಳ ಎದುರು ದೊಡ್ಡ ದೊಡ್ಡ ಕಟೌಟ್ಸ್ ರಾರಾಜಿಸುತ್ತಿದ್ದು, ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.