ಕೋಲಾರ: ಮೆಥೋಡಿಸ್ಟ್ ಚರ್ಚ್ಗೆ ಸೇರುವ ಕೋಲಾರದ ಮಿಷನ್ ಹಾಸ್ಪಿಟಲ್ ಎಂದು ಪ್ರಸಿದ್ಧಯಾಗಿದ್ದ ಇಟಿಸಿಎಂ ಆಸ್ಪತ್ರೆ ಲೆಕ್ಕಾಧಿಕಾರಿ ಜಾನ್ಸನ್ ಕುಂದರ್ ಎಂಬುವರ ಮೇಲೆ ಮೆಥೋಡಿಸ್ಟ್ ಚರ್ಚ್ನ ಪಾದ್ರಿ ಶಾಂತಕುಮಾರ್ ಅವರು ನಕಲಿ ವಿದ್ಯಾರ್ಥಿನಿಯರಿಂದ ಕೋಲಾರ ಮಹಿಳಾ ಪೊಲೀಸ್ ಠಾಣೆಗೆ ಲೈಂಗಿಕ ಕಿರುಕುಳ ಕೊಡಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು.
ಈ ವಿಷಯ ಬಯಲಾದ ಹಿನ್ನೆಲೆ ಪಾದ್ರಿ ಶಾಂತಕುಮಾರ್ ಸೇರಿ ನಾಲ್ವರ ವಿರುದ್ದ ನಕಲಿ ದೂರು ನೀಡಿದ ಹಿನ್ನೆಲೆ ಪ್ರಕರಣ ದಾಖಲಾಗಿ ಶಾಂತಕುಮಾರ್ ಸೇರಿ ನಾಲ್ವರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಹೊರ ಬಂದಿದ್ದರು. ಹಾಗಾಗಿ ಪೊಲೀಸ್ ಠಾಣೆಯಲ್ಲಿ ಪಾದ್ರಿ ಶಾಂತಕುಮಾರ್ ಮೇಲೆ ಕೇಸ್ ಬಾಕಿ ಇರುವ ಕಾರಣ ಅವರು ಚರ್ಚ್ನ ಪಾದ್ರಿಯ ಸ್ಥಾನವನ್ನು, ಚರ್ಚ್ನ ಸಭೆಯನ್ನು ನಡೆಸಲು ಯೋಗ್ಯರಲ್ಲ ಹಾಗಾಗಿ ಅವರನ್ನು ಚರ್ಚ್ನಿಂದ ಹೊರಹಾಕುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಲಾಯಿತು.
ಇನ್ನು ಚರ್ಚ್ಗೆ ಸೇರಿದ ಆಸ್ತಿ ಪಾಸ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ, ಇಟಿಸಿಎಂ ಆಸ್ಪತ್ರೆಯನ್ನು ಮಾರಾಟ ಮಾಡುವ ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈವೇಳೆ ಪೊಲೀಸರು ಮೆಥೋಡಿಸ್ಟ್ ಚರ್ಚ್ ಒಳಗೆ ಹೋಗದಂತೆ ತಡೆದರು. ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು, ಪ್ರತಿಭಟನಾಕಾರರು ಪಾದ್ರಿ ಶಾಂತಕುಮಾರ್ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದರು.