ಕೋಲಾರ :ಬಂಗಾರಪೇಟೆ ತಾಲೂಕಿಗೆ ಖಾಯಂ ತಹಶೀಲ್ದಾರ್ ನೇಮಕ ಮಾಡಬೇಕು ಎಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಪ್ರತಿಭಟಿಸಿದರು.
ಬಂಗಾರಪೇಟೆ ತಾಲೂಕಿಗೆ ಖಾಯಂ ತಹಶೀಲ್ದಾರ್ ನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆ - Kolar Protest by Green Service activists
ಅಲ್ಲದೇ ತಾಲೂಕಿನಲ್ಲಿ ಒತ್ತುವರಿಯಾಗಿರುವ ರಾಜಕಾಲುವೆಗಳ ತೆರವಿಗಾಗಿ ವಿಶೇಷ ತಂಡ ರಚನೆ ಮಾಡಿ ಪ್ರತಿ ಹಳ್ಳಿಗೂ ಜಾನುವಾರು ಮೇವಿಗಾಗಿ 20 ಎಕರೆ ಗೋಮಾಳ ಜಮೀನು ಮೀಸಲಿಟ್ಟು ತಾಲೂಕಿನ ಅಭಿವೃದ್ಧಿಗೆ ಆದ್ಯತೆ ನೀಡಬೇಕು..
ಹಸಿರುಸೇನೆ ಕಾರ್ಯಕರ್ತರಿಂದ ಪ್ರತಿಭಟನೆ
ನೂರಾರು ಕಾರ್ಯಕರ್ತರು ಇಂದು ಬಂಗಾರಪೇಟೆ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು. ಸರ್ಕಾರ ಕೂಡಲೇ ರೈತ ವಿರೋಧಿ ಕಾಯ್ದೆಗಳ ಸುಗ್ರಿವಾಜ್ಞೆಗಳನ್ನು ವಾಪಸ್ ಪಡೆಯಬೇಕು ಮತ್ತು ತಾಲೂಕಿಗೆ ಖಾಯಂ ತಹಶೀಲ್ದಾರ್‌ರ ನೇಮಕ ಮಾಡಬೇಕೆಂದು ಒತ್ತಾಯಿಸಿದರು.
ಅಲ್ಲದೇ ತಾಲೂಕಿನಲ್ಲಿ ಒತ್ತುವರಿಯಾಗಿರುವ ರಾಜಕಾಲುವೆಗಳ ತೆರವಿಗಾಗಿ ವಿಶೇಷ ತಂಡ ರಚನೆ ಮಾಡಿ ಪ್ರತಿ ಹಳ್ಳಿಗೂ ಜಾನುವಾರು ಮೇವಿಗಾಗಿ 20 ಎಕರೆ ಗೋಮಾಳ ಜಮೀನು ಮೀಸಲಿಟ್ಟು ತಾಲೂಕಿನ ಅಭಿವೃದ್ಧಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.