ಕೋಲಾರ: ಗ್ರಾಮ ಪಂಚಾಯಿತಿ ಅಧ್ಯಕ್ಷ - ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಬೌನ್ಸರ್ಗಳನ್ನು ಬಳಸಿಕೊಂಡ ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ.
ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷರನ್ನು ಕರೆತರಲು ಬೌನ್ಸರ್ಗಳ ರಕ್ಷಣೆ ಕೋಲಾರ ತಾಲೂಕಿನ ನರಸಾಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷ - ಉಪಾಧ್ಯಕ್ಷ ಗಾದಿಗೆ ಇಂದು ಆಯ್ಕೆ ಪ್ರಕ್ರಿಯೆ ನಡೆಯಿತು. ಪಂಚಾಯಿತಿಯಲ್ಲಿ ಅಧ್ಯಕ್ಷ ಗಾದಿ ಹಿಡಿಯಲು ಪಟ್ಟು ಹಿಡಿದ ಮಾಜಿ ಸಚಿವ ವರ್ತೂರು ಪ್ರಕಾಶ್ ಬೆಂಬಲಿತರನ್ನು ಕರೆತರಲು ಬೌನ್ಸರ್ಗಳನ್ನು ಬಳಸಿಕೊಳ್ಳಲಾಗಿದೆ.
ಪಂಚಾಯಿತಿಯಲ್ಲಿ ಒಟ್ಟು 18 ಸದಸ್ಯರ ಬಲವಿದ್ದು, ಅಂತಿಮವಾಗಿ ವರ್ತೂರು ಬಣದ ಸುಮಿತ್ರಮ್ಮ ಅಧ್ಯಕ್ಷೆಯಾಗಿ ಮತ್ತು ಉಪಾಧ್ಯಕ್ಷರಾಗಿ ಸುಮನ್ ಚಂದ್ರು ಆಯ್ಕೆಯಾಗಿದ್ದಾರೆ. ಸದಸ್ಯರನ್ನು ಪಂಚಾಯಿತಿ ಕಟ್ಟಡದವರೆಗೆ ಟಿಟಿ ವಾಹನವೊಂದರಲ್ಲಿ ಬೌನ್ಸರ್ಗಳ ರಕ್ಷಣೆಯೊಂದಿಗೆ ಕರೆತರಲಾಯಿತು.
ಓದಿ:ಯಾರಿಗೂ ಕೊರೊನಾ ವ್ಯಾಕ್ಸಿನ್ ಪಡೆಯುವುದು ಕಡ್ಡಾಯ ಎಂದಿಲ್ಲ.. ಡಿಸಿಎಂ ಅಶ್ವತ್ಥ್ ನಾರಾಯಣ
ವಿರುದ್ಧ ಬಣದವರು ಆ ಸಂದರ್ಭದಲ್ಲಿ ಸದಸ್ಯರನ್ನು ಸೆಳೆಯಲು ವಿಫಲ ಪ್ರಯತ್ನ ನಡೆಸಿದರು. ಈ ಸಂದರ್ಭದಲ್ಲಿ ಬಿಗುವಿನ ವಾತಾವರಣವಾಗಿತ್ತು. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಬೌನ್ಸರ್ಗಳನ್ನು ಸಹ ಅಲ್ಲಿಂದ ಕಳುಹಿಸಿದರು.