ಕೋಲಾರ: ನಗರದಲ್ಲಿ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿರುವ ಪೊಲೀಸರು ಪಿಎಫ್ಐ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ. ಕೋಲಾರದ ಶಾಹಿಂದ್ ಷಾ ನಗರ ಸೇರಿದಂತೆ ವಿವಿಧೆಡೆಯಲ್ಲಿ, ಪಿಎಫ್ಐ ಮುಖಂಡರ ಮನೆ ಮೇಲೆ ದಾಳಿ ನಡೆಸಿ ಆರು ಜನರನ್ನು ವಶಕ್ಕೆ ಪಡೆಯಲಾಗಿದೆ.
ನವಾಜ್ ಪಾಷಾ, ವಸೀಂ ಪಾಷಾ, ಸಿದ್ದಿಕ್ ಪಾಷಾ, ಇಂತಿಯಾಜ್ ಪಾಷಾ, ಶಾಬಾಜ್ ಪಾಷಾ ಹಾಗೂ ಅಲ್ಲಾಬಕಾಶ್ ಎಂಬುವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.