ಕರ್ನಾಟಕ

karnataka

ETV Bharat / state

ಕರ್ತವ್ಯನಿರತ ಪೊಲೀಸ್​ ಹೆಡ್​ಕಾನ್ಸ್​ಟೇಬಲ್​ ಹೃದಯಾಘಾತದಿಂದ ಸಾವು.. - kolar gold field police station

ಕರ್ತವ್ಯ ನಿರತ ಪೊಲೀಸ್ ಕಾನ್ಸ್​ಟೇಬಲ್​ ಹೃದಯಾಘಾತದಿಂದ ಮೃತಪಟ್ಟಿರುವಂತಹ ಘಟನೆ ಕೋಲಾರದಲ್ಲಿ ನಡೆದಿದೆ.

police head constable died of heart attack
ಕರ್ತವ್ಯ ನಿರತ ಪೊಲೀಸ್​ ಹೆಡ್​ಕಾನ್ಸ್​ಟೇಬಲ್​ ಹೃದಯಾಘಾತದಿಂದ ಸಾವು...

By

Published : Dec 1, 2022, 5:02 PM IST

Updated : Dec 1, 2022, 5:11 PM IST

ಕೋಲಾರ: ಜಿಲ್ಲೆಯ ಬಂಗಾರಪೇಟೆ ಠಾಣೆಯಲ್ಲಿ ಕಳೆದ ರಾತ್ರಿ ಠಾಣೆಯ ಹೆಡ್​ ಕಾನ್ಸ್​ಟೇಬಲ್​ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ರಾತ್ರಿ ಪಾಳಯದ ಕೆಲಸಕ್ಕಾಗಿ ಬಂಗಾರಪೇಟೆ ಪೊಲೀಸ್ ಠಾಣೆಗೆ ಸುರೇಶ್ ಕುಮಾರ್​ ಹಾಜರಾಗಿದ್ದರು. ಇಂದು ಬೆಳಗಿನ ಜಾವದ ಸುಮಾರಿಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಬಂಗಾರಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಪೊಲೀಸ್ ಕಾನ್ಸ್​​ಟೇಬಲ್​ ಸಾವನ್ನಪ್ಪಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿದ ಕೆಜಿಎಫ್ ಎಸ್ಪಿ ಧರಣಿದೇವಿ ಅವರು ಹೆಡ್​ ಕಾನ್ಸ್​ಟೇಬಲ್ ಸುರೇಶ್ ಕುಮಾರ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಇದನ್ನೂ ಓದಿ:ಬೆಂಗಳೂರು: ವಿವಿಧ ಅಪರಾಧ ಕೃತ್ಯಗಳಲ್ಲಿ 16 ಮಂದಿ ಬಂಧನ, 64 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ

Last Updated : Dec 1, 2022, 5:11 PM IST

ABOUT THE AUTHOR

...view details