ಕರ್ನಾಟಕ

karnataka

ETV Bharat / state

ಬಂಗಾರಪೇಟೆ ಶಾಸಕರ ಮಾಜಿ ಗನ್ ಮ್ಯಾನ್ ನಿಂದ ಅತ್ಮಹತ್ಯೆಗೆ ಯತ್ನ - Gun man Divakar suicide

ಬಂಗಾರಪೇಟೆ ಶಾಸಕ ಎಸ್. ಎನ್. ನಾರಾಯಣಸ್ವಾಮಿಯವರ ಗನ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಪೇದೆ ದಿವಾಕರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಶಾಸಕರ ಮಾಜಿ ಗನ್ ಮ್ಯಾನ್ ನಿಂದ ಅತ್ಮಹತ್ಯೆಗೆ ಯತ್ನ

By

Published : Sep 1, 2019, 5:48 PM IST

ಕೋಲಾರ : ಹಿರಿಯ ಪೊಲೀಸ್ ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಪೊಲೀಸ್​ ಪೇದೆಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ.

ಜಿಲ್ಲೆಯ ಕೆಜಿಎಫ್​ನ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೇದೆ ದಿವಾಕರ್, ಹಿರಿಯ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಮನೆಯಲ್ಲಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ಇವರಿಗೆ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಶಾಸಕರ ಮಾಜಿ ಗನ್ ಮ್ಯಾನ್ ನಿಂದ ಅತ್ಮಹತ್ಯೆಗೆ ಯತ್ನ

ಬಂಗಾರಪೇಟೆ ಶಾಸಕ ಎಸ್. ಎನ್. ನಾರಾಯಣಸ್ವಾಮಿಯವರ ಗನ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ದಿವಾಕರ್ ಇತ್ತೀಚೆಗಷ್ಟೆ ವಾಪಾಸ್ಸಾಗಿದ್ದರು. ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ABOUT THE AUTHOR

...view details