ಕರ್ನಾಟಕ

karnataka

ETV Bharat / state

ಕೋಲಾರದಲ್ಲಿ ಪಿಎಫ್​ಐ ಕಚೇರಿ ಬಂದ್​

ಪಿಎಫ್​ಐ ಸಂಘಟನೆಯನ್ನು 5 ವರ್ಷಗಳ ಕಾಲ ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಜಾರಿ ಮಾಡಿದ ಬೆನ್ನಲ್ಲೇ ಕೊಲಾರದಲ್ಲಿ ಪಿಎಫ್​ಐ ಕಚೇರಿಯನ್ನು ಬಂದ್​ ಮಾಡಲಾಗಿದೆ.

KN_KLR_PFI_O
ಪಿಎಫ್​ಐ ಕಚೇರಿ ಬಂದ್​ಗೊಳಿಸಿದ ಅಧಿಕಾರಿಗಳು

By

Published : Sep 29, 2022, 9:35 AM IST

ಕೋಲಾರ: 5 ವರ್ಷಗಳ ಕಾಲ ಪಿಎಫ್​ಐ ಮತ್ತು ಅದರ ಅಂಗಸಂಸ್ಥೆಗಳನ್ನು ನಿಷೇಧಿಸಿ ಬುಧವಾರ ಕೇಂದ್ರ ಸರ್ಕಾರ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಕೇಂದ್ರದ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಸರ್ಕಾರದ ಆದೇಶದಂತೆ ತಹಶೀಲ್ದಾರ್​ ಅವರ ಸಮ್ಮುಖದಲ್ಲಿ ಕೋಲಾರ ಜಿಲ್ಲಾ ಪಿಎಫ್‌ಐ ಕಚೇರಿಯನ್ನು ಅಧಿಕಾರಿಗಳು ಬಂದ್ ಮಾಡಿದ್ದಾರೆ.

ನಗರದ ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ಪಿಎಫ್‌ಐ ಕಚೇರಿಯ ಬೀಗ ಒಡೆದು, ತಹಶೀಲ್ದಾರ್ ನಾಗರಾಜ್ ಹಾಗು ಡಿವೈಎಸ್​ಪಿ ಮುರಳಿಧರ್ ಅವರ ನೇತೃತ್ವದಲ್ಲಿ ಪರಿಶೀಲನೆ ನಡೆಸಿ ಬಳಿಕ ಮಹಜರು ಮಾಡಲಾಯಿತು. ಬಳಿಕ ಕಚೇರಿಯ ಬಾಗಿಲನ್ನು ಬಂದ್ ಮಾಡಿದ್ದಾರೆ.

ಇನ್ನು, ಶಹನಾ ಜನ್ನೀಸ್ ಎಂಬುವವರ ಮನೆಯನ್ನು ಲೀಸ್ ಪಡೆದು ಮನೆಯನ್ನೇ ಪಿಎಫ್‌ಐ ಕಚೇರಿಯಾಗಿ ಮಾಡಲಾಗಿತ್ತು. ಜಿಲ್ಲಾಧ್ಯಕ್ಷ ಮುಜಾಹಿದ್ ಪಾಷಾ ಅವರ ಹೆಸರಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಮಾಡಲಾಗಿರುವ ಕರಾರು ಪತ್ರಗಳು ಪೊಲೀಸರಿಗೆ ಸಿಕ್ಕಿವೆ. ಹಲವು ಬ್ಯಾನರ್ ಸೇರಿದಂತೆ ಕೆಲ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ:ನಿಷೇಧದ ಬೆನ್ನಲ್ಲೇ ಶಿರಸಿ ಪಿಎಫ್ಐ ಅಧ್ಯಕ್ಷನ ಮನೆ ಮೇಲೆ ಪೊಲೀಸ್​​ ದಾಳಿ

ABOUT THE AUTHOR

...view details