ಕರ್ನಾಟಕ

karnataka

ETV Bharat / state

ಪೊಲೀಸರ ಯಶಸ್ವಿ ಕಾರ್ಯಾಚರಣೆ: 22 ಕೆಜಿ ಗಾಂಜಾ ವಶ - Kolar marijuana sale news

ಕೋಲಾರದ ಡಿಸಿಐಬಿ ಇನ್ಸ್‌ಪೆಕ್ಟರ್ ಗೋವರ್ಧನ್ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ, ಜಿಲ್ಲೆಯ ವಿವಿಧೆಡೆಗೆ ಸಾಗಣೆ ಮಾಡಲು ಸಂಗ್ರಹಿಸಿದ್ದ 22 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಗಾಂಜಾ
ಗಾಂಜಾ

By

Published : Sep 11, 2020, 10:23 AM IST

ಕೋಲಾರ: ಡಿಸಿಐಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಚಿಂತಾಮಣಿ ರಸ್ತೆಯ ಮದನಹಳ್ಳಿ ಬಳಿ 22 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಡಿಸಿಐಬಿ ಇನ್ಸ್‌ಪೆಕ್ಟರ್ ಗೋವರ್ಧನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಕೋಲಾರದ ವಿವಿಧೆಡೆಗೆ ಸಾಗಣೆ ಮಾಡಲು ಸಂಗ್ರಹಿಸಿದ್ದ ಗಾಂಜಾ ವಶಪಡಿಸಿಕೊಂಡು, ಒಂದು ಬೈಕ್ ಮತ್ತು ಆರೋಪಿ ಶಫಿವುಲ್ಲಾ ಎಂಬಾತನನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ವಡಗೇರನಹಳ್ಳಿ ಗ್ರಾಮದವನು ಎನ್ನಲಾಗಿದ್ದು, ಈತ ಆಂಧ್ರದಿಂದ ಗಾಂಜಾ ತಂದು ಕೋಲಾರ ನಗರದಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

ABOUT THE AUTHOR

...view details