ಕೋಲಾರ: ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಸುಮಾರು 20ಕ್ಕೂ ಹೆಚ್ಚು ಗೋವುಗಳನ್ನು ರಕ್ಷಣೆ ಮಾಡಿರುವಂತಹ ಘಟನೆ ಕೋಲಾರದಲ್ಲಿ ಜರುಗಿದೆ. ಕೋಲಾರ ನಗರದ ರಹಮತ್ ನಗರದಲ್ಲಿ ಈ ಘಟನೆ ಜರುಗಿದ್ದು, ಗಲ್ ಪೇಟೆ ಪೊಲೀಸರು ದಾಳಿ ನಡೆಸಿದ್ದಾರೆ.
ಕೋಲಾರದ ರಹಮತ್ ನಗರದ ನಿವಾಸಿ, ಆರೀಫ್ ಎಂಬುವರಿಗೆ ಸೇರಿದ ಕಸಾಯಿಖಾನೆ ಇದಾಗಿದ್ದು, ಹಲವಾರು ದಿನಗಳಿಂದ ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿದ್ದರು ಎನ್ನಲಾಗಿದೆ. ಪೊಲೀಸರು ದಾಳಿ ಮಾಡಿದ ವೇಳೆ ಕಸಾಯಿಖಾನೆಯಲ್ಲಿ ಹಸುಗಳಿಗೆ, ನೀರು ಮೇವಿಲ್ಲದೇ ನರಳಿ ನರಳಿ ಸಾಯುತ್ತಿರುವ ದೃಶ್ಯಗಳು ಕಂಡು ಬಂದಿದೆ. ಅಲ್ಲದೇ ನೀರು ಆಹಾರ ಇಲ್ಲದೆ ಕಸಾಯಿ ಖಾನೆಯಲ್ಲಿ ಎರಡು ಹಸುಗಳು ಸತ್ತುಬಿದ್ದಿದ್ದವು.