ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ನಿಂದ ಸುಳ್ಳು ಗ್ಯಾರಂಟಿ ಕಾರ್ಡ್.. ಭ್ರಷ್ಟಾಚಾರದಿಂದ ಕರ್ನಾಟಕ ಬಚಾವ್ ಮಾಡಬೇಕು: ಪ್ರಧಾನಿ ಮೋದಿ ಹೇಳಿಕೆ

ಕೋಲಾರದಲ್ಲಿ ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರ ಭಾಷಣ ಮಾಡಿದ ಪ್ರಧಾನಿ ಮೋದಿ, ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಹೇಳಿದರು.

PM Narendra Modi Speech in Kolar public program
ಭ್ರಷ್ಟಾಚಾರದಿಂದ ಕರ್ನಾಟಕ ಬಚಾವ್ ಮಾಡಬೇಕು: ಪ್ರಧಾನಿ ಮೋದಿ ಹೇಳಿಕೆ

By

Published : Apr 30, 2023, 1:32 PM IST

Updated : Apr 30, 2023, 3:49 PM IST

ಕಾಂಗ್ರೆಸ್​ನಿಂದ ಸುಳ್ಳು ಗ್ಯಾರಂಟಿ ಕಾರ್ಡ್.. ಭ್ರಷ್ಟಾಚಾರದಿಂದ ಕರ್ನಾಟಕ ಬಚಾವ್ ಮಾಡಬೇಕು: ಪ್ರಧಾನಿ ಮೋದಿ ಹೇಳಿಕೆ

ಕೋಲಾರ: ಈ ಬಾರಿಯ ಕರ್ನಾಟಕ ಚುನಾವಣೆಯು ಯಾರನ್ನೋ ಶಾಸಕ, ಸಚಿವರ ಮಾಡಲು ನಡೆಯುವ ಚುನಾವಣೆ ಅಲ್ಲ. ರಾಜ್ಯ, ದೇಶದ ಅಭಿವೃದ್ಧಿಯ ನಿರ್ಮಾಣ ಮಾಡುವಂತಹದ್ದು‌ ಮತ್ತು ಮುಂದಿನ 25 ವರ್ಷಗಳ ವಿಕಾಸಿತ ಭಾರತ ಮುನ್ನಡೆಸುವ ಚುನಾವಣೆ ಇದಾಗಿದೆ. ಕಾಂಗ್ರೆಸ್​ ಮತ್ತು ಬಿಜೆಪಿ ಭ್ರಷ್ಟಾಚಾರದಿಂದ ಕರ್ನಾಟಕವನ್ನು ಬಚಾವ್ ಮಾಡುವುದು ಈ ಬಾರಿಯ ಚುನಾವಣೆಯ ಗುರಿ ಎಂದು ಪ್ರಧಾನಿ ಮೋದಿ ನರೇಂದ್ರ ಹೇಳಿದರು.

ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ, ಚಿನ್ನದ ನಾಡು ಕೋಲಾರದ ಜನತೆಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿ ಭಾಷಣ ಶುರು ಮಾಡಿದರು. ಇಷ್ಟು ಜನ ಸಂಖ್ಯೆಯನ್ನು ನೋಡಿ ಕಾಂಗ್ರೆಸ್ ಹಾಗೂ ಜೆಡಿಎಸ್​ ನಿದ್ದೆಗೆಡಿಸಿದೆ. ''ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ'' ಎಂದು ಕನ್ನಡದಲ್ಲೇ ಹೇಳಿದರು.

ಅಸ್ಥಿರದ ಸರ್ಕಾರ ಬಂದರೆ ಪ್ರಗತಿ ಆಗುವುದಿಲ್ಲ. ಅದರಿಂದ ನಷ್ಟವೇ ಜಾಸ್ತಿ. ಅಸ್ಥಿರ ಸರ್ಕಾರ ಇದ್ದರೆ, ದೇಶಕ್ಕೆ ಬೇಕಾದ ಪ್ರಗತಿಯ ಯೋಜನೆಗಳನ್ನು ನಿರ್ಧಾರ ಮಾಡುವುದು ಕಷ್ಟ. ಭ್ರಷ್ಟಾಚಾರದಿಂದ ಕರ್ನಾಟಕವನ್ನು ಬಜಾವ್ ಮಾಡುವುದು ಈ ಬಾರಿಯ ಚುನಾವಣೆಯ ಗುರಿ. ಕೇಂದ್ರದಲ್ಲಿ ಅನೇಕ ದಶಕಗಳ ಬಳಿಕ ಸ್ಥಿರ ಸರ್ಕಾರ ಬಂತು. ಅದರ ಲಾಭ ಏನೂ ಎನ್ನುವುದು ಈಗಾಗಲೇ ನೋಡಿದ್ದೀರ. 2014ಕ್ಕಿಂತ ಮುನ್ನ ಕಾಂಗ್ರೆಸ್ ಕಾಲದಲ್ಲಿ ಏನೆಲ್ಲಾ ನಡೆಯಿತು ಗೊತ್ತಿದೆ ಎಂದರು.

ಕಾಂಗ್ರೆಸ್​ ಆಡಳಿತ ನೋಡಿದ ಪ್ರಪಂಚದ ಜನ ದೇಶದ ಬಗ್ಗೆ ನಂಬಿಕೆ ಇರಲಿಲ್ಲ. ಬಿಜೆಪಿಗೆ ನೀವು ನೀಡಿದ ಒಂದು ಮತ ಎಲ್ಲವನ್ನೂ ಬದಲಾವಣೆ ಮಾಡಿದೆ. ಇವತ್ತು ಭಾರತಕ್ಕೆ ತನ್ನದೇ ಆದ ಪ್ರತಿಷ್ಠೆಯಲ್ಲಿ ಬೆಳೆದು ನಿಂತಿದೆ. ಭಾರತವನ್ನು ಹೊಳೆಯುವ ನಕ್ಷತ್ರವಾಗಿ ಮಾಡಲಾಗಿದೆ. ಕೊರೊನಾ ವೇಳೆ ಸರ್ಕಾರ ತೆಗೆದುಕೊಂಡು ಕ್ರಮಗಳ ಬಗ್ಗೆ ಪ್ರಪಂಚದಲ್ಲಿ ಹೆಸರಾಗಿದ್ದೇವೆ. ಕೋಟ್ಯಾಂತರ ಜನರಿಗೆ ಉಚಿತ ಲಸಿಕೆ ನೀಡಲಾಯಿತು ಎಂದು ಪ್ರಧಾನಿ ಹೇಳಿದರು.

ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇದೆ. ಬಿಜೆಪಿ ಈ ಬಾರಿ ಸಂಕಲ್ಪ ಮಾಡಿದೆ. ಕರ್ನಾಟಕವನ್ನು ದೇಶದಲ್ಲಿ ನಂಬರ್ ಓನ್ ರಾಜ್ಯವಾಗಿ ಮಾಡುವುದು. ಈ ಹಿಂದೆ ಕಾಂಗ್ರೆಸ್, ಜೆಡಿಎಸ್ ಸರ್ಕಾರ ಇದ್ದಾಗ, ಅವರು ಅಭಿವೃದ್ದಿ ಮಾಡಲು ಮನಸ್ಸು ಮಾಡಲಿಲ್ಲ. ನಂತರ ಡಬಲ್ ಇಂಜಿನ್ ಸರ್ಕಾರ ಬಂದು ಅಭಿವೃದ್ದಿಯ ವೇಗ ಹೆಚ್ಚಿಸಿದೆ. ಈ ಬಾರಿ ಅಭಿವೃದ್ಧಿಯನ್ನು ಮುಂದುವರೆಸಬೇಕಾದ ಅವಶ್ಯಕತೆ ಇದೆ‌. ಕೇಂದ್ರ ಸರ್ಕಾರ ವೇಗವಾದ ಇಂಜಿನ್, ಹಾಗೆ ಕರ್ನಾಟಕದಲ್ಲಿ ಸ್ಥಾಪನೆ ಮಾಡಬೇಕು. ಕಾಂಗ್ರೆಸ್​ನಂತಹ ಗುಜರಿ ಇಂಜಿನ್ ಇಟ್ಟುಕೊಂಡರೆ ಯಾವುದೆ ಪ್ರಯೋಜನ ಆಗೋದಿಲ್ಲ ಎಂದು ದೂರಿದರು.

ಕಾಂಗ್ರೆಸ್​ನಿಂದ ಸುಳ್ಳು ಗ್ಯಾರಂಟಿ ಕಾರ್ಡ್​:ಕಾಂಗ್ರೆಸ್​ನವರು ಸುಳ್ಳು ಗ್ಯಾರಂಟಿ ಕಾರ್ಡ್ ನೀಡುತ್ತಿದ್ದಾರೆ. ಇದು ಯಾವತ್ತೂ ಸಹ ಆಗಲ್ಲ. 2005ರಲ್ಲಿ ಅಧಿಕಾರಕ್ಕೆ ಬಂದಾಗ ಗ್ಯಾರಂಟಿ ಕೊಟ್ಟರು. ಪ್ರತಿಯೊಂದು ಹಳ್ಳಿಗೆ ವಿದ್ಯುತ್ ಪೂರೈಕೆ ಮಾಡುತ್ತೇವೆ ಎಂದಿದ್ದರು. ಆದರೆ, ಈ ಒಂದು ಗ್ಯಾರಂಟಿ ಕೊಟ್ಟಿದ್ದರ ಕಡೆ ಗಮನವೇ ಕಾಂಗ್ರೆಸ್​ಗೆ ಇಲ್ಲ. 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ನೀಡಿರಲಿಲ್ಲ‌. ಒಂದು ಸಾವಿರ ದಿನದಲ್ಲಿ ನಾವು 18 ಸಾವಿರ ಮನೆಗಳಿಗೆ ವಿದ್ಯುತ್ ತಲುಪಿಸಿದ್ದೇವೆ. ಅವರ ಗ್ಯಾರಂಟಿಯನ್ನು ಪೂರ್ಣ ಮಾಡಿದ್ದು ನಮ್ಮ ಬಿಜೆಪಿ ಸರ್ಕಾರ. ಕಾಂಗ್ರೆಸ್​ ಗ್ಯಾರಂಟಿ ಕಾರ್ಡ್​ ಬಗ್ಗೆ ವಿಶ್ವಾಸ, ನಂಬಿಕೆ ಬೇಡ. ಅವರು ಬರೀ ಮೋಸ ಮಾಡುವುದನ್ನು ಕಲಿತಿದ್ದಾರೆ ಎಂದು ಮೋದಿ ದೂರಿದರು.

ಇದನ್ನೂ ಓದಿ:ಚುನಾವಣಾ ಪ್ರಚಾರ ಅಬ್ಬರ.. ಮೇ 6, 7 ರಂದು ಮತ್ತೆ ಬೆಂಗಳೂರಿನಲ್ಲಿ ಮೋದಿ ಪ್ರವಾಸ..

Last Updated : Apr 30, 2023, 3:49 PM IST

ABOUT THE AUTHOR

...view details