ಕೋಲಾರ: ಕಳೆದ ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ಇಂದು ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಕೋಲಾರ ತಾಲ್ಲೂಕಿನ ಕಾಕಿನತ್ತ ಗ್ರಾಮದ ಕೃಷಿ ಹೊಂಡದಲ್ಲಿ ಶವ ಪತ್ತೆಯಾಗಿದೆ.
ತೊಟ್ಲಿ ಗ್ರಾಮದ ಟಿ.ಎಂ.ಮಂಜುನಾಥ್ (35) ಮೃತ ವ್ಯಕ್ತಿ. ಈತ ಡಿ.4ರಂದು ಹಣ ತರಲು ತೊಟ್ಲಿ ಗ್ರಾಮದಿಂದ ಪಕ್ಕದ ಕಾಕಿನತ್ತ ಗ್ರಾಮಕ್ಕೆ ತೆರಳಿದ್ದಾನೆ. ಆದ್ರೆ ಅಂದಿನಿಂದ ಈತ ನಾಪತ್ತೆಯಾಗಿದ್ದನು. ಎಲ್ಲೋ ಹೋಗಿರಬೇಕು ಮತ್ತೆ ಬರುತ್ತಾನೆ ಎಂದುಕೊಂಡಿದ್ದ ಸಂಬಂಧಿಕರು ಇಂದು ಪೊಲೀಸರಿಗೆ ದೂರು ನೀಡಿದ್ದಾರೆ. ಇಂದು ಮಧ್ಯಾಹ್ನದ ವೇಳೆ ನಾರಾಯಣಸ್ವಾಮಿ ಎಂಬುವವರ ಕೃಷಿ ಹೊಂಡದಲ್ಲಿ ಈತನ ಶವ ಪತ್ತೆಯಾಗಿದೆ.