ಕರ್ನಾಟಕ

karnataka

ETV Bharat / state

ಕೋಲಾರದಲ್ಲಿ ಮುಕ್ತ ವಾಹನ ಸಂಚಾರ; ರಸ್ತೆಗಿಳಿದ 50 ಸಾರಿಗೆ ಬಸ್​ಗಳು - Lockdown news

ಒಂದು ಬಸ್ ನಲ್ಲಿ 27 ಮಂದಿಗೆ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು, ಸುಮಾರು 50 ಬಸ್ ಗಳನ್ನ ರಸ್ತೆಗಿಳಿಸಲಾಗಿದೆ. ಜೊತೆಗೆ ಪ್ರಯಾಣಿಕರ ಅಗತ್ಯತೆಗೆ ತಕ್ಕಂತೆ ಹೆಚ್ಚಿನ ಬಸ್​ಗಳನ್ನು ರಸ್ತೆಗಿಳಿಸಲಿದ್ದಾರೆ.

Permission to Vehicles inside of kolar
ಜಿಲ್ಲೆಯ ಒಳಗಡೆ ಸಂಚಾರಕ್ಕೆ ಮುಕ್ತ

By

Published : May 5, 2020, 10:44 AM IST

ಕೋಲಾರ: ಹಸಿರು ವಲಯ ಕೋಲಾರ ಜಿಲ್ಲೆಯಾದ್ಯಂತ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಪ್ರಾರಂಭವಾಗಿದೆ. ಹೊರ ಜಿಲ್ಲೆಗಳಿಗೆ ಹೊರತುಪಡಿಸಿ, ಕೇವಲ ತಾಲೂಕು ಕೇಂದ್ರಗಳಿಗೆ ಸಂಚಾರ ಆರಂಭಗೊಂಡಿದೆ.

ಒಂದು ಬಸ್ ನಲ್ಲಿ 27 ಮಂದಿಗೆ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು, ಸುಮಾರು 50 ಬಸ್ ಗಳನ್ನ ರಸ್ತೆಗಿಳಿಸಲಾಗಿದೆ. ಜೊತೆಗೆ ಪ್ರಯಾಣಿಕರ ಅಗತ್ಯತೆಗೆ ತಕ್ಕಂತೆ ಹೆಚ್ಚಿನ ಬಸ್​ಗಳನ್ನ ರಸ್ತೆಗಿಳಿಸಲಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಮಾತ್ರ ಬಸ್ ಸಂಚಾರಕ್ಕೆ ಅವಕಾಶವಿದ್ದು, ಬಸ್ ನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರ ಸಂಪೂರ್ಣ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತಿದೆ.

ನಿನ್ನೆಯಷ್ಟೇ ಕೋಲಾರದಲ್ಲಿ ಬಸ್ ಸಂಚಾರಕ್ಕೆ ಚಾಲನೆ ನೀಡಿದ್ದು, ಬಸ್ ನಿಲ್ದಾಣಕ್ಕೆ ಬರುವಂತಹ ಪ್ರಯಾಣಿಕರಿಗೆ ಅಧಿಕಾರಿಗಳಿಂದ ಥರ್ಮಲ್‌ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಅಲ್ಲದೆ, ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಹಾಗೂ ಬಸ್​ ನಲ್ಲಿ ಪ್ರಯಾಣಿಸುವ ವೇಳೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ABOUT THE AUTHOR

...view details