ಕೋಲಾರ: ಮಾಲೂರು ತಾಲ್ಲೂಕಿನ ಡಿ.ಎನ್.ದೊಡ್ಡಿ ಗ್ರಾಮದಲ್ಲಿ ತಮಿಳುನಾಡಿನ ಜನರ ಓಡಾಟ ಹೆಚ್ಚಾದ ಹಿನ್ನೆಲೆ, ಗ್ರೀನ್ಝೋನ್ ಕೋಲಾರ ಜನತೆಯಲ್ಲಿ ಆತಂಕ ಮನೆ ಮಾಡಿದೆ.
ಕೋಲಾರ ಗಡಿಭಾಗದಲ್ಲಿ ತಮಿಳುನಾಡಿಗರ ಓಡಾಟ; ಜನರಲ್ಲಿ ಹೆಚ್ಚಿದ ಕೊರೊನಾ ಆತಂಕ
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಡಿ.ಎನ್.ದೊಡ್ಡಿ ಗ್ರಾಮದಲ್ಲಿ ತಮಿಳುನಾಡಿನ ಜನರ ಓಡಾಟ ಹೆಚ್ಚಾಗಿದ್ದು, ಜಿಲ್ಲೆಯ ಜನರಿಗೆ ಕೊರೊನಾ ಸೋಂಕು ಹರಡುವ ಆತಂಕ ಹೆಚ್ಚಾಗಿದೆ.
ಕೋಲಾರ ಗಡಿಭಾಗದಲ್ಲಿ ತಮಿಳುನಾಡಿಗರ ಓಡಾಟ..ಜನರಲ್ಲಿ ಹೆಚ್ಚಿದ ಕೊರೊನಾ ಆತಂಕ
ಡಿ.ಎನ್.ದೊಡ್ಡಿ ಗ್ರಾಮದ ಸಂತೆಯಲ್ಲಿ ಮಾಸ್ಕ್ ಹಾಕದೆ, ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೆ ತರಕಾರಿ ಹಾಗೂ ಮಾಂಸ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಈ ಗ್ರಾಮಕ್ಕೆ ತಮಿಳುನಾಡು ಹೊಂದಿಕೊಂಡಿದ್ದು, ತಮಿಳುನಾಡಿನ ಜನರಿಂದ ಸೋಂಕು ಹರಡುವ ಆತಂಕ ಹೆಚ್ಚಾಗಿದೆ. ಈ ಭಾಗದಲ್ಲಿ ಯಾವುದೇ ಚೆಕ್ಪೊಸ್ಟ್ ಇಲ್ಲದೆ TN ರಿಜಿಸ್ಟ್ರೇಷನ್ ವಾಹನಗಳ ಸಂಚಾರ ಕೂಡ ಹೆಚ್ಚಾಗಿದೆ.
ಈಗಾಗಲೇ ಆಂಧ್ರದ ಸೋಂಕಿತರು ಕೋಲಾರದಲ್ಲಿ ಓಡಾಡಿಕೊಂಡು ಹೋಗಿದ್ದು, ಇವರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 24 ಮಂದಿಯನ್ನ ಕ್ವಾರಂಟೈನ್ ಮಾಡಲಾಗಿದೆ.