ಕರ್ನಾಟಕ

karnataka

ETV Bharat / state

ಕೊರೊನಾ: ಸಾಮಾಜಿಕ ಅಂತರ ಮರೆತು ಬಾಕ್ಸ್​ನೊಳಗೆ ಚಪ್ಪಲಿ ಬಿಟ್ಟು ಒಟ್ಟಿಗೆ ಕುಳಿತ ಜನ - pradhan mantri jandhan yojana

ದೇಶದಾದ್ಯಂತ ಲಾಕ್​ಡೌನ್​ ಜಾರಿಯಾಗಿರುವ ಹಿನ್ನೆಲೆ ದಿನಗೂಳಿ ನೌಕರರಿಗೆ ಹಾಗೂ ಬಡವರಿಗೆ ಸಹಾಯವಾಗಲಿ ಎಂದು ಪ್ರಧಾನಮಂತ್ರಿ ಜನ್​​ಧನ್​ ಯೋಜನೆಯಡಿ 500 ರೂಪಾಯಿ ಹಾಕಲಾಗಿದೆ. ಈ ಹಿನ್ನೆಲೆ ಇಲ್ಲಿನ ಕರ್ನಾಟಕ ಬ್ಯಾಂಕ್​ ಮುಂದೆ ಮಹಿಳೆಯರು ಕ್ಯೂ ನಿಂತ್ತಿದ್ದು, ಸಮಾಜಿಕ ಅಂತರ ಕಾಯ್ದುಕೊಳ್ಳದೆ ಒಟ್ಟಿಗೆ ಸೇರಿದ್ದಾರೆ.

people doesnt fallow social distance in kolar
ಕೊರೊನಾ: ಸಾಮಾಜಿಕ ಅಂತರ ಮರೆತು ಬಾಕ್ಸ್​ನೊಳಗೆ ಚಪ್ಪಲಿ ಬಿಟ್ಟು ಒಟ್ಟಿಗೆ ಕುಳಿತ ಜನ

By

Published : Apr 9, 2020, 6:10 PM IST

ಕೋಲಾರ:ಕೊರೊನಾ ಲಾಕ್​ಡೌನ್ ಹಿನ್ನೆಲೆ ಪ್ರಧಾನಮಂತ್ರಿ ಜನ್​ಧನ್​ ಖಾತೆಗೆ 500 ರೂ. ಸಹಾಯಧನ ಜಮಾ ಮಾಡಲಾಗಿದೆ. ಈ ಹಿನ್ನೆಲೆ ಹಣ ಬಿಡಿಸಿಕೊಳ್ಳಲು ಜನ ಬ್ಯಾಂಕ್​ಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಕೋಲಾರದ ಬಂಗಾರಪೇಟೆಯ ಕರ್ನಾಟಕ ಬ್ಯಾಂಕ್ ಮುಂದೆ ಲಾಕ್​ಡೌನ್​ ಇದ್ದರೂ ಜನರ ಗುಂಪೇ ನೆರೆದಿತ್ತು.

ಕೊರೊನಾ.. ಸಾಮಾಜಿಕ ಅಂತರ ಮರೆತು ಬಾಕ್ಸ್​ನೊಳಗೆ ಚಪ್ಪಲಿ ಬಿಟ್ಟು ಒಟ್ಟಿಗೆ ಕುಳಿತ ಜನ..

ಈ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಾತ್ಕಾಲಿಕ ಬಾಕ್ಸ್​ಗಳನ್ನು ರಚಿಸಲಾಗಿತ್ತು. ಆದರೆ, ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಒಂದೆಡೆ ಸೇರಿದ್ದಾರೆ. ಹೊರಗೆ ಬಿಸಿಲು ಹೆಚ್ಚಾಗಿದ್ದ ಕಾರಣ ಬಾಕ್ಸ್​​ಗಳಲ್ಲಿ ತಮ್ಮ ಚಪ್ಪಲಿ ಬಿಟ್ಟು ನೆರಳಿನಲ್ಲಿ ನಿಂತಿದ್ದರು. ಕಳೆದೆರಡು ದಿನಗಳಿಂದ ಬ್ಯಾಂಕ್​ಗಳ ಮುಂದೆ ಮಹಿಳೆಯರ ಸಾಲು ಕಂಡು ಬರುತ್ತಿದ್ದು, ಲಾಕ್​ಡೌನ್​ ಇದ್ದರೂ ಹಣ ಬಿಡಿಸಿಕೊಂಡು ಹೋಗಲು ಬ್ಯಾಂಕ್​ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ.

ABOUT THE AUTHOR

...view details