ಕರ್ನಾಟಕ

karnataka

ETV Bharat / state

2ಸಾವಿರ ಕೋಟಿಗಿಂತಲೂ ಅಧಿಕ ಹಣ ಸಚಿವರ ಜೇಬಿಗೆ ಹೋಗಿದೆ .. ಡಾ. ಜಿ ಪರಮೇಶ್ವರ್ ಆರೋಪ - ಕೋಲಾರ

ಜನರು ಬೀದಿಯಲ್ಲಿ ಸಾಯುವ ಪರಿಸ್ಥಿತಿ ರಾಜ್ಯದಲ್ಲಿ ಬಂದಿದೆ. ಇಂತಹ ಹೇಯ, ನೀಚ ಕೃತ್ಯ ಮತ್ತೊಂದಿಲ್ಲ. ಮಾನವೀಯತೆ, ಮನುಷ್ಯತ್ವ ಇಲ್ಲದ ಸರ್ಕಾರ ನಮ್ಮ ರಾಜ್ಯದಲ್ಲಿದೆ..

Parameshwar  outrage
2ಸಾವಿರ ಕೋಟಿಗಿಂತಲೂ ಅಧಿಕ ಹಣ ಸಚಿವರ ಜೇಬಿಗೆ ಹೋಗಿದೆ: ಪರಮೇಶ್ವರ್ ಆರೋಪ

By

Published : Aug 3, 2020, 2:40 PM IST

ಕೋಲಾರ :ಕೊರೊನಾ ಹೆಸರಿನಲ್ಲಿ ಸುಮಾರು ಎರಡು ಸಾವಿರ ಕೋಟಿಗಿಂತಲು ಅಧಿಕ ಹಣ ಸಚಿವರ ಜೇಬಿಗೆ ಹೋಗಿದೆ ಎಂದು ಮಾಜಿ ಸಚಿವ ಡಾ. ಜಿ ಪರಮೇಶ್ವರ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು.

ಕೋವಿಡ್‌ ವೈದ್ಯಕೀಯ ಉಪಕರಣಗಳ ಖರೀದಿ ಹಗರಣ ಕುರಿತಂತೆ ಡಾ. ಜಿ ಪರಮೇಶ್ವರ್ ಹೇಳಿಕೆ

ಇಂದು ಕೋಲಾರದಲ್ಲಿ ಮಾತನಾಡಿದ ಅವರು, ಕೊರೊನಾ ಆವರಿಸಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಸೋಂಕು ತಡೆಗಟ್ಟುವಲ್ಲಿ ಸರ್ಕಾರ ನಿರ್ಲಕ್ಷ್ಯತೆ ವಹಿಸಿದೆ. ಕೊರೊನಾ ಹೆಸರಿನಲ್ಲಿ ದುಡ್ಡು ಮಾಡುವ ಕೆಟ್ಟ ಸ್ಥಿತಿಯಲ್ಲಿ ರಾಜ್ಯ ಸರ್ಕಾರವಿದೆ ಎಂದರು. ಸೋಂಕು ತಡೆ ಸಲುವಾಗಿ ಕಾಂಗ್ರೆಸ್ ಪಕ್ಷ ನೀಡಿದ ಸಲಹೆಗಳನ್ನ ಸಹ ನಿರ್ಲಕ್ಷ್ಯ ಮಾಡಿದ್ದು, ಸೋಂಕಿನ ಕುರಿತು ಜನಸಮುದಾಯಕ್ಕೆ ಮಾಹಿತಿ ತಲುಪಿಸುವಲ್ಲಿಯೂ ಸಹ ವಿಫಲವಾಗಿದೆ ಎಂದು ಗುಡುಗಿದರು.

ಆರೋಗ್ಯ ಸಚಿವರಿಗೆ ಕೊರೊನಾ ಕುರಿತು ಮಾಹಿತಿಯೇ ಇಲ್ಲ. ಇತ್ತ ವೈದ್ಯಕೀಯ ಸಚಿವರು ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಾ ಜನರನ್ನ ಮರಳು ಮಾಡುತ್ತಿದ್ದಾರೆ. ಇದರಿಂದ ಜನರು ಬೀದಿಯಲ್ಲಿ ಸಾಯುವ ಪರಿಸ್ಥಿತಿ ರಾಜ್ಯದಲ್ಲಿ ಬಂದಿದೆ. ಇಂತಹ ಹೇಯ, ನೀಚ ಕೃತ್ಯ ಮತ್ತೊಂದಿಲ್ಲ. ಮಾನವೀಯತೆ, ಮನುಷ್ಯತ್ವ ಇಲ್ಲದ ಸರ್ಕಾರ ನಮ್ಮ ರಾಜ್ಯದಲ್ಲಿದೆ. ಭ್ರ ಷ್ಟಾಚಾರ ಮಾಡುವ ಸಲುವಾಗಿ ಆರೋಗ್ಯ, ವೈದ್ಯಕೀಯ, ಸಮಾಜ ಕಲ್ಯಾಣ ಸೇರಿ ವಿವಿಧ ಇಲಾಖೆಗಳ ಸಚಿವರ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ತಮಗಿಷ್ಟ ಬಂದ ಹಾಗೆ ಖರೀದಿಯಲ್ಲಿ ತೊಡಗಿದ್ದಾರೆ. ಈ ಕುರಿತು ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.

ಇನ್ನು, ಇದೇ ವೇಳೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್, ನನ್ನ ಆಡಳಿತದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದ್ರೆ, ನಾನು ತನಿಖೆಗೆ ಸಿದ್ದನಿದ್ದೇನೆ. ಅಲ್ಲದೆ ನನ್ನ ವಿರುದ್ಧ ಆರೋಪ ಮಾಡುವಂತಹವರು ಹೊಟ್ಟೆಗೆ ಏನ್ ತಿಂತಾರೆ ಎಂದು ಅವರು ಪ್ರಶ್ನಿಸಿದರು. ಅಲ್ಲದೇ ಜವಾಬ್ದಾರಿ ಸ್ಥಾನದಲ್ಲಿದ್ದವರ ಮೇಲೆ ಆರೋಪ ಬಂದಾಗ ದಾಖಲೆಗಳ ಸಮೇತ ತೋರಿಸಬೇಕು. ಭಾರತ ಮಾತೆಯ ಮಾನ ಕಾಪಾಡಲು ಅವತಾರವೆತ್ತಿರುವ ಅವತಾರ ಪುರುಷರು, ಋಷಿಮುನಿಯಗಳಿಂದ ಜನ್ಮ ಪಡೆದವರು ಇದೀಗ ಎಲ್ಲಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ರು.

ABOUT THE AUTHOR

...view details