ಕೋಲಾರ:ಪೌರಕಾರ್ಮಿಕರಿಗೆ ಪಾದ ಪೂಜೆ ಮಾಡಿ ಚಿಕನ್ ಬಿರಿಯಾನಿ ವಿತರಿಸುವುದರ ಮೂಲಕ ಬಿಜೆಪಿ ಕಾರ್ಯಕರ್ತರು ಕೋಲಾರದಲ್ಲಿ ಕಾರ್ಮಿಕರಿಗೆ ಗೌರವ ಸಲ್ಲಿಸಿದರು.
ಬಿಜೆಪಿ ತಾಲೂಕು ಘಟಕದ ವತಿಯಿಂದ ಪೌರಕಾರ್ಮಿಕರಿಗೆ ಪಾದ ಪೂಜೆ - ಬಿಜೆಪಿ ಘಟಕ
ಕೋಲಾರ ಜಿಲ್ಲೆ ಕೆಜಿಎಫ್ ನಗರದಲ್ಲಿ ಬಿಜೆಪಿ ಘಟಕದ ವತಿಯಿಂದ ಪೌರಕಾರ್ಮಿಕರಿಗೆ ಪಾದ ಪೂಜೆ ಮಾಡಿ ಚಿಕನ್ ಬಿರಿಯಾನಿ ವಿತರಿಸಲಾಯಿತು.
ಕೋಲಾರ ಜಿಲ್ಲೆ ಕೆಜಿಎಫ್ ನಗರದಲ್ಲಿ ಪೌರಕಾರ್ಮಿಕರಿಗೆ ತಾಲೂಕು ಬಿಜೆಪಿ ಘಟಕದ ವತಿಯಿಂದ ಗೌರವ ಸಲ್ಲಿಲಾಯಿತು. ಕಳೆದ ಒಂದು ತಿಂಗಳಿನಿಂದ ಪ್ರತಿನಿತ್ಯ ಸಾರ್ವಜನಿಕರಿಗೆ ಆಹಾರ ಪದಾರ್ಥಗಳು ಹಾಗೂ ಊಟವನ್ನ ನೀಡುತ್ತಿದ್ದ ತಾಲೂಕು ಬಿಜೆಪಿ ಘಟಕದವರು, ಇಂದು ಪೌರಕಾರ್ಮಿಕರಿಗೆ ಪಾದ ಪೂಜೆ ಮಾಡಿ ಆಹಾರ ಪದಾರ್ಥಗಳೊಂದಿಗೆ ಚಿಕನ್ ಬಿರಿಯಾನಿ ನೀಡಿದ್ರು.
ಕೆಜಿಎಫ್ ನಗರದವನ್ನ ಸ್ವಚ್ಛಗೊಳಿಸುವ ಮೂಲಕ ಮಾರಕ ಕೊರೊನಾ ವೈರಸ್ ತಡೆಗಟ್ಟುವಲ್ಲಿ ಪೌರಕಾರ್ಮಿಕರು ಶ್ರಮ ವಹಿಸುತ್ತಿದ್ದು, ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಕಳೆದ ಒಂದು ತಿಂಗಳಿನಿಂದ ಸಾರ್ವಜನಿಕರಿಗೆ ಪೌರಕಾರ್ಮಿಕರಿಗೆ ಊಟ, ತರಕಾರಿ, ಮಾಸ್ಕ್ ನೀಡುತ್ತಿದ್ದು, ಇಂದು ವಿಶೇಷವಾಗಿ ಪಾದ ಪೂಜೆ ಮಾಡಿ ಬಿರಿಯಾನಿ ವಿತರಣೆ ಮಾಡಿದ್ರು.