ಕರ್ನಾಟಕ

karnataka

ETV Bharat / state

ಪೌರತ್ವ ಕಾಯ್ದೆ ವಿರೋಧಿಸಿ ಕೋಲಾರದಲ್ಲಿ ಸರ್ವ ಧರ್ಮೀಯರ ಸಹಭೋಜನ - Opposition to the Citizenship Act in Kolar

ಪೌರತ್ವ ಕಾಯಿದೆ ವಿರೋಧಿಸಿ ಕೋಲಾರ ಜಿಲ್ಲೆಯಲ್ಲಿ ವಿಭಿನ್ನ ರೀತಿಯ ಪ್ರತಿಭಟನೆ ನಡೆಸಲಾಗಿದ್ದು, ಹಿಂದೂ,ಮುಸ್ಲಿಂ ಸೇರಿ ಸಹಭೋಜನ ಮಾಡಿದ್ದಾರೆ.

wdddd
ಪೌರತ್ವ ಕಾಯ್ದೆ ವಿರೋಧಿಸಿ ಕೋಲಾರದಲ್ಲಿ ಸರ್ವ ಧರ್ಮೀಯರ ಸಹಭೋಜನ

By

Published : Dec 29, 2019, 7:09 PM IST

ಕೋಲಾರ:ಪೌರತ್ವ ತಿದ್ದುಪಡಿ ವಿರೋಧಿಸಿ ಶ್ರೀನಿವಾಸಪುರ ಪಟ್ಟಣದ ತಾಲೂಕು ಕಚೇರಿ ಬಳಿ ಹಿಂದೂ, ಮುಸ್ಲಿಂ,ಕ್ರೈಸ್ತರು ಸಹಭೋಜನ ಕೂಟ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಪೌರತ್ವ ಕಾಯ್ದೆ ವಿರೋಧಿಸಿ ಕೋಲಾರದಲ್ಲಿ ಸರ್ವ ಧರ್ಮೀಯರ ಸಹಭೋಜನ

ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀನಿವಾಸ್‌ ಚಾಲನೆ ನೀಡಿದರು. ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲಾ ಧರ್ಮದವರೊಡನೆ ಊಟ ಮಾಡುವುದರ ಮೂಲಕ ಪೌರತ್ವ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದ್ರು.

ನಗರದಲ್ಲಿ ಪೌರತ್ವ ವಿರೋಧದ ಕಿಚ್ಚು ಮುಂದುವರೆದ ಭಾಗವಾಗಿ ಸಹಭೋಜನ ಕೂಟವನ್ನ ಹಮ್ಮಿಕೊಳ್ಳಲಾಗಿತ್ತು. ಪೌರತ್ವ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿ, ಕೇಂದ್ರ ಸರ್ಕಾರ ಕೂಡಲೇ ಸಿಎಎ ಕಾಯ್ದೆ ಹಿಂಪಡೆಯಬೇಕು ಎಂದು ಆಗ್ರಹಿಸಿದ್ರು.

ABOUT THE AUTHOR

...view details