ಕೋಲಾರ: ಆರೋಪ ಮಾಡುವುದು ಪ್ರತಿಪಕ್ಷದವರ ಕೆಲಸ, ಅವರಿರೋದೆ ಆರೋಪ ಮಾಡುವುದಕ್ಕೆ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಗೆ, ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ್ ಟಾಂಗ್ ನೀಡಿದ್ದಾರೆ.
ಆರೋಪ ಮಾಡುವುದು ಪ್ರತಿಪಕ್ಷದವರ ಕೆಲಸ: ಸಚಿವ ಶ್ರೀಮಂತ ಪಾಟೀಲ್ - Minister Srimanth patil news
ಬಿಜೆಪಿ ಸರ್ಕಾರದಲ್ಲಿ ಯಾವುದೇ ಡ್ರಗ್ ಮಾಫಿಯಾ ನಡೆದಿಲ್ಲ. ಆರೋಪ ಮಾಡುವುದು ಪ್ರತಿಪಕ್ಷದವರ ಕೆಲಸ ಎಂದು ಹೇಳುವ ಮೂಲಕ ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ್, ಹೆಚ್ಡಿಕೆಗೆ ಟಾಂಗ್ ನೀಡಿದ್ರು.
ಸಚಿವ ಶ್ರೀಮಂತ ಪಾಟೀಲ್
ಕೋಲಾರ ಜಿಲ್ಲೆಯಲ್ಲಿಂದು ಪ್ರವಾಸ ಕೈಗೊಂಡು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಯಾವುದೇ ಡ್ರಗ್ ಮಾಫಿಯಾ ನಡೆದಿಲ್ಲ ಎಂದರು.
ಆರೋಪ ಮಾಡುವ ಕುಮಾರಸ್ವಾಮಿ ದಾಖಲೆ ಬಿಡುಗಡೆ ಮಾಡಲಿ. ಕುಮಾರಸ್ವಾಮಿಯವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದರು.