ಕೋಲಾರ:ಆನ್ಲೈನ್ ವಂಚನೆಯ ಬಗ್ಗೆ ಎಚ್ಚರವಾಗಿರುವಂತೆ ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ಜನ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಅದರಲ್ಲೂ ಉನ್ನತ ವಿದ್ಯಾವಂತರೇ ಈ ಜಾಲಕ್ಕೆ ಸಿಲುಕುತ್ತಿರುವುದು ವಿಪರ್ಯಾಸ. ಇದೀಗ ಕೋಲಾರದಲ್ಲಿ ಇಬ್ಬರು ವೈದ್ಯರು ಆನ್ಲೈನ್ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡಿರುವ ಬಗ್ಗೆ ವರದಿಯಾಗಿದೆ.
ಜಿಲ್ಲೆಯ ಮುಳಬಾಗಿಲು ತಾಲೂಕಿನ ರಾಕೇಶ್ ಹಾಗೂ ರೀನಾ ಎಂಬ ಇಬ್ಬರು ವೈದ್ಯರು ಆನ್ಲೈನ್ ದೋಖಾ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡವರು. ಜಿಲ್ಲಾ ಔಷಧ ಗೋಡೌನ್ ನಿರ್ವಾಹಕ ಶ್ರೀರಾಮ ಎಂಬುವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿದ ಖದೀಮರು, ತುರ್ತಾಗಿ ಹಣ ಬೇಕೆಂದು ವೈದ್ಯರಿಗೆ ಮೆಸೇಜ್ ಮಾಡಿದ್ದರು. ಮೆಸೇಜ್ ಮಾಡಿರುವುದು ಶ್ರೀರಾಮ ಅವರೇ ಎಂದು ನಂಬಿದ ವೈದ್ಯರು ತಲಾ 18 ಸಾವಿರ ರೂ.ನಂತೆ ಹಣ ಕಳಿಸಿದ್ದರು.