ಕರ್ನಾಟಕ

karnataka

ETV Bharat / state

ಕೋಲಾರ : ಕೆಸಿ ವ್ಯಾಲಿ ನೀರನ್ನು ಕದಿಯುತ್ತಿದ್ದವರ ಮೇಲೆ ಅಧಿಕಾರಿಗಳ ದಾಳಿ

ಕೆಲವರು ಕೆಸಿ ವ್ಯಾಲಿಯಿಂದ ನೀರನ್ನು ಕದಿಯುತ್ತಿದ್ದರು. ಈ ಕುರಿತಂತೆ ಅಧಿಕಾರಿಗಳು ಖಚಿತ ಮಾಹಿತಿ ಪಡೆದು ಇಂದು ದಾಳಿ ನಡೆಸಿದ್ದಾರೆ. ಇಂತಹವರ ವಿರುದ್ಧ ಸೂಕ್ತ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕೆಸಿ ವ್ಯಾಲಿ ನೀರನ್ನು ಕದಿಯುತ್ತಿದ್ದವರ ಮೇಲೆ ಅಧಿಕಾರಿಗಳು ದಾಳಿ
Officers raided who were theft water from KC Valley

By

Published : Jan 6, 2021, 5:16 PM IST

ಕೋಲಾರ:ಅಕ್ರಮವಾಗಿ ಕೆಸಿ ವ್ಯಾಲಿ ನೀರನ್ನು ಕದಿಯುತ್ತಿದ್ದವರ ಮೇಲೆ ಸಣ್ಣ ನೀರಾವರಿ ಅಧಿಕಾರಿಗಳು ದಾಳಿ ನಡೆಸಿ ಪೈಪ್​ಗಳು, ಕೇಬಲ್, ಮೋಟರ್​​ಗಳನ್ನು ವಶಪಡಿಸಿಕೊಂಡಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.

ಕೆಸಿ ವ್ಯಾಲಿ ನೀರನ್ನು ಕದಿಯುತ್ತಿದ್ದವರ ಮೇಲೆ ಅಧಿಕಾರಿಗಳು ದಾಳಿ

ತಾಲೂಕಿನ ಕೂತಾಂಡಹಳ್ಳಿ ಗ್ರಾಮದ ಮಂಜುನಾಥ್ ಎಂಬುವರು ಕೆಸಿ ವ್ಯಾಲಿಗೆ ಅಕ್ರಮವಾಗಿ ಪಂಪ್​​​ ಮೋಟಾರ್ ಅಳವಡಿಸಿಕೊಂಡಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದ ಕೆಸಿ ವ್ಯಾಲಿ ಎಇಇ ಕೃಷ್ಣ ಮತ್ತು ಸಣ್ಣ ನೀರಾವರಿ ಇಲಾಖೆ ಅಭಿಯಂತರ ಸುರೇಶ್ ಕುಮಾರ್ ಹಾಗೂ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ್ದರು.

ಓದಿ: ವರದಕ್ಷಿಣೆಗಾಗಿ ಪ್ರೀತಿಸಿ ಮದುವೆಯಾದ ಪತ್ನಿಯನ್ನೇ 3ನೇ ಮಹಡಿಯಿಂದ ನೂಕಿ ಕೊಂದ ಪಾಪಿ ಪತಿ

ಮಂಜುನಾಥ್ ಅವರು ರಾತ್ರಿ ವೇಳೆ ಬೃಹತ್ ಕೃಷಿ ಹೊಂಡಕ್ಕೆ ನೀರು ತುಂಬಿಸಿಕೊಂಡು ಕೃಷಿಯೇತರ ಚಟುವಟಿಕೆಗೆ ಬಳಸಿಕೊಳ್ಳುತ್ತಿದ್ದಾರೆ. ನೀರು ಕದಿಯುತ್ತಿರುವುದನ್ನು ಪ್ರಶ್ನಿಸಿದ ಗ್ರಾಮಸ್ಥರಿಗೆ ಅವಾಜ್ ಹಾಕುವ ಮೂಲಕ ಬೆದರಿಕೆ ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ನೀಡಿದ ದೂರಿನನ್ವಯ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಕೆಸಿ ವ್ಯಾಲಿ ನೀರನ್ನು ಕದಿಯುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಎಇಇ ಕೃಷ್ಣಪ್ಪ ಎಚ್ಚರಿಕೆ ನೀಡಿದರು.

ABOUT THE AUTHOR

...view details