ಕರ್ನಾಟಕ

karnataka

ETV Bharat / state

ಮುನಿಯಪ್ಪ ಸೋಲಿಸಲು ಜೊತೆಯಾಗಿ ಕೆಲಸ ಮಾಡಿದ್ದಿವಿ: ಜೆಡಿಎಸ್ ಶಾಸಕ ಶ್ರೀನಿವಾಸ್​ಗೌಡ - undefined

ಕೆ.ಹೆಚ್​. ಮುನಿಯಪ್ಪ ವಿರುದ್ಧವಾಗಿ ನಾವು ವೋಟ್​ ಮಾಡಿದ್ದು ನಿಜ, ಅವರ ಬಗ್ಗೆ ನಮಗೆ ವಿರೋಧವಿತ್ತು. ಹಾಗಾಗಿ ಅವರ ವಿರುದ್ಧ ಚುನಾವಣೆಯಲ್ಲಿ ಕೆಲಸ ಮಾಡಿದ್ದೇವೆ ಎಂದು ಜೆಡಿಎಸ್​ ಶಾಸಕ ಶ್ರೀನಿವಾಸ ಗೌಡ ಒಪ್ಪಿಕೊಂಡಿದ್ದಾರೆ.

ಜೆಡಿಎಸ್ ಶಾಸಕ ಶ್ರೀನಿವಾಸಗೌಡ

By

Published : May 27, 2019, 7:01 PM IST

Updated : May 27, 2019, 8:35 PM IST

ಕೋಲಾರ:ಕೋಲಾರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಜೆಡಿಎಸ್​ ಶಾಸಕ ಶ್ರೀನಿವಾಸ ಗೌಡಅವರು,ತಾವು ಮುನಿಯಪ್ಪ ವಿರುದ್ಧ ಚುನಾವಣೆಯಲ್ಲಿ ಕೆಲಸ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

ಇನ್ನುಪಕ್ಷ ಬದಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ 5 ವರ್ಷ ಪೂರೈಸಲಿದ್ದಾರೆ. ಸರ್ಕಾರ ಸುಭದ್ರವಾಗಿದೆ. ಲೋಕಸಭೆ ಫಲಿತಾಂಶದಿಂದ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.

ಇತ್ತೀಚೆಗೆ ನೂತನ ಕೋಲಾರ ಲೋಕಸಭಾ ಸದಸ್ಯ ಮುನಿಸ್ವಾಮಿ, ಯಡಿಯೂರಪ್ಪ ಅವರನ್ನ ಮುಖ್ಯಮಂತ್ರಿ ಮಾಡಲು 5 - 6 ಜನ ಶಾಸಕರನ್ನ ಕೊಡುವೆ ಎನ್ನುವ ಮೂಲಕ ಆಪರೇಷನ್ ಕಮಲದ ಸುಳಿವು ನೀಡಿದ್ರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಶ್ರೀನಿವಾಸಗೌಡ, ಬಿಜೆಪಿ ಗೆಲ್ಲಿಸಲು ನಾವೆಲ್ಲಾ ಒಂದಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಸರ್ಕಾರ ಸುಭದ್ರವಾಗಿರುತ್ತೆ. ಯಾರು ಕೂಡ ಪಕ್ಷ ಬಿಡಲ್ಲ. ಕಾಂಗ್ರೆಸ್, ಜೆಡಿಎಸ್ ಶಾಸಕರು ಆಯಾಯ ಪಕ್ಷದಲ್ಲಿ ಮುಂದುವರೆಯುತ್ತಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಶಾಸಕ ಶ್ರೀನಿವಾಸಗೌಡ

ನಾನು ಸಚಿವನಾಗಲು ಯಾವುದೇ ಬೇಡಿಕೆ ಇಟ್ಟಿಲ್ಲ. ಸಚಿವ ಸ್ಥಾನ ಕೊಟ್ರೆ ಬೇಡ ಎನ್ನಲ್ಲ. ನಾನು 10 ವರ್ಷಗಳ ಹಿಂದೆ ಮಂತ್ರಿಯಾಗಿದ್ದವನು. ಗೌರವಯುತವಾಗಿ ನಡೆದು ಕೊಂಡಿದ್ದೇನೆ. ಯಾವ ಖಾತೆಯ ಆಸೆಯೂ ನನಗಿಲ್ಲ. ಮಂತ್ರಿ ಮಾಡಿದ್ರೆ ನನ್ನಷ್ಟು ಖುಷಿ ಪಡುವವರೆ ಇಲ್ಲ ಎಂದು ಇದೇ ವೇಳೆ ತಮ್ಮ ಮನದಾಳವನ್ನ ಬಿಚ್ಚಿಟ್ಟರು.

Last Updated : May 27, 2019, 8:35 PM IST

For All Latest Updates

TAGGED:

ABOUT THE AUTHOR

...view details