ಕರ್ನಾಟಕ

karnataka

ETV Bharat / state

ಕೋಲಾರ: ಕೆರೆಗಳ ಅಭಿವೃದ್ಧಿ ಬಗ್ಗೆ ನಿರ್ಮಲಾ ಸೀತಾರಾಮನ್ ಅಸಮಾಧಾನ - ಕೆರೆಗಳ ಅಭಿವೃದ್ದಿ ಕಾಮಗಾರಿಗಳ‌ ವೀಕ್ಷಣೆ

ಕೋಲಾರದಲ್ಲಿ ಕೆರೆ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Nirmala Sitharaman Inspects  Lake Development Works
ಕೆರೆ ಕಾಮಗಾರಿ ವೀಕ್ಷಿಸಿದ ನಿರ್ಮಲಾ ಸೀತಾರಾಮನ್

By

Published : Sep 30, 2022, 2:30 PM IST

ಕೋಲಾರ: 'ಆಜಾದಿ ಕಾ ಅಮೃತ‌ ಸರೋವರ ಯೋಜನೆ'ಯಡಿ ಕೆರೆಗಳ ಅಭಿವೃದ್ದಿ ಕಾಮಗಾರಿಗಳ‌ ವೀಕ್ಷಣೆ ಮಾಡಲು ಕೋಲಾರಕ್ಕೆ ಬಂದಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಸಮಾಧಾನ ವ್ಯಕ್ತಪಡಿಸಿದರು.

ಕೋಲಾರ ಜಿಲ್ಲಾದ್ಯಂತ ಆಜಾದಿ ಕಾ ಅಮೃತ‌ ಸರೋವರ ಯೋಜನೆಯಡಿ ಕೆರೆಗಳ ಅಭಿವೃದ್ದಿಗಾಗಿ, ಸುಮಾರು 75 ಕೆರೆಗಳನ್ನ ಆಯ್ಕೆ ಮಾಡಿಕೊಂಡು ಕಾಮಗಾರಿ ಪ್ರಾರಂಭಿಸಲಾಗಿತ್ತು. ಈ ಹಿನ್ನೆಲೆ ಇಂದು ಸಚಿವೆ ನಿರ್ಮಲಾ ಸೀತಾರಾಮನ್ ಕೆರೆ ಕಾಮಗಾರಿ ವೀಕ್ಷಣೆಗೆ ಕೋಲಾರಕ್ಕೆ ಆಗಮಿಸಿದ್ದರು.

ಕೆರೆ ಕಾಮಗಾರಿ ವೀಕ್ಷಿಸಿದ ನಿರ್ಮಲಾ ಸೀತಾರಾಮನ್

ಕೆರೆಯನ್ನ ವೀಕ್ಷಿಸಿದ ನಿರ್ಮಾಲಾ ಸೀತಾರಾಮನ್ ಅಧಿಕಾರಿಗಳ ವಿರುದ್ದ ಕಿಡಿಕಾರಿದರು. ಕೆರೆಗೆ ನೀರು ಸುಗಮವಾಗಿ‌ ಹರಿದು ಬರಬೇಕು. ನೀರು ಹರಿದು ಬರದಿದ್ದರೆ ಕೆರೆ ಹೇಗೆ ತುಂಬುತ್ತದೆ?. ಮುಂದಿನ ಕೆರೆಗಳಿಗೆ ಯಾವ‌ ರೀತಿ ನೀರು‌ ಹರಿದು ಹೋಗಲು ಸಾಧ್ಯ? ಎಂದು ಪ್ರಶ್ನಿಸಿದರು. ಕೆರೆಗಳ ಅಭಿವೃದ್ದಿಗೆ ಮತ್ತಷ್ಟು‌ ಹಣ ನೀಡುತ್ತೇವೆ. ಆದರೆ, ಕಾಮಗಾರಿಯನ್ನು ಸಮರ್ಪಕವಾಗಿ ಮಾಡಬೇಕು ಎಂದು ಜಿ.ಪಂ‌ ಸಿಇಒ ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕೆರೆಗಳ ಕಾಮಗಾರಿಗೆ ಸಚಿವರ ಅನುದಾನದಿಂದ 1.83 ಕೋಟಿ‌ ರೂ.ಬಿಡುಗಡೆ ಮಾಡಲಾಗಿದೆ. ಕೋಲಾರದ 75 ಕೆರೆಗಳನ್ನ ಕಾಮಗಾರಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಂತೆ ಇಂದು ಜಿಲ್ಲೆಯ ಬಂಗಾರಪೇಟೆ ತಾಲೂಕಿನ‌ ಚಿಕ್ಕ ಅಂಕಡಹಳ್ಳಿ ಕೆರೆಯ ಅಭಿವೃದ್ದಿ‌ ಕಾಮಗಾರಿ‌ ವೀಕ್ಷಣೆ ಮಾಡಿದ್ದು, ನಂತರ ಕೆಜಿಎಫ್​​ನ ಪೆದ್ದಪಲ್ಲಿ ಮತ್ತು ಕೋಲಾರ ತಾಲೂಕಿನ ಶೆಟ್ಟಿಕೊತ್ತನೂರು ಗ್ರಾಮದ ಕೆರೆಗಳ‌ ವೀಕ್ಷಣೆ ಮಾಡಲಿದ್ದಾರೆ. ಸಚಿವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಸಂಸದ ಎಸ್.ಮುನಿಸ್ವಾಮಿ ಮತ್ತು ಮಾಜಿ ಶಾಸಕರು ಸಾಥ್ ನೀಡಿದ್ದಾರೆ.

ಇದನ್ನೂ ಓದಿ:ಕೋಲಾರದಲ್ಲಿ ಕೆರೆಗಳ ಅಭಿವೃದ್ಧಿ : ಸಂಸದರ ಅನುದಾನದಿಂದ ಹಣ ಬಿಡುಗಡೆ ಮಾಡಿದ ನಿರ್ಮಲಾ ಸೀತಾರಾಮನ್

ABOUT THE AUTHOR

...view details