ಕೋಲಾರ: ಪ್ರೇಮ ವಿವಾಹಕ್ಕೆ ಮನೆಯವರು ವಿರೋಧ ಮಾಡುತ್ತಿರುವ ಹಿನ್ನೆಲೆ ನವಜೋಡಿ ಪೊಲೀಸ್ ಇಲಾಖೆಯ ಮೊರೆ ಹೋಗಿದ್ದಾರೆ. ಶ್ರೀನಿವಾಸಪುರ ತಾಲೂಕಿನ ಆರ್.ತಿಮ್ಮಸಂದ್ರ ಗ್ರಾಮದ ನವಿತಾ ಹಾಗೂ ಮೋಹನ್ ಪ್ರೀತಿಸಿ ಮದುವೆಯಾಗಿರುವ ಯುವಜೋಡಿ.
ಜಾತಿ ಭೂತ.. ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ, ಪೊಲೀಸ್ ಮೊರೆ ಹೋದ ನವಜೋಡಿ - ಕೋಲಾರದಲ್ಲಿ ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ ಪೊಲೀಸ್ ರಕ್ಷಣೆಗೆ ಮೊರೆ ಹೋದ ನವ ಜೋಡಿ
ಶ್ರೀನಿವಾಸಪುರ ತಾಲೂಕಿನ ಆರ್.ತಿಮ್ಮಸಂದ್ರ ಗ್ರಾಮದ ಪ್ರೀತಿಸಿ ಮದುವೆಯಾದ ನವ ಜೋಡಿಯೊಂದು, ಮನೆಯವರು ವಿರೋಧ ಮಾಡುತ್ತಿರುವ ಹಿನ್ನೆಲೆ ಪೊಲೀಸರ ಮೊರೆಹೋಗಿದ್ದಾರೆ.
ಪೊಲೀಸ್ ರಕ್ಷಣೆಗೆ ಮೊರೆ ಹೋದ ನವ ಜೋಡಿ
ಈ ಜೋಡಿ ಮಾರ್ಚ್ 7 ರಂದು ತಿರುಪತಿಯಲ್ಲಿ ವಿವಾಹವಾಗಿದ್ದು, ಪ್ರೇಮ ವಿವಾಹಕ್ಕೆ ಯುವತಿ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ನವಿತಾ ಮಾವ ಲೋಕೇಶ್ ನಿಂದ ಕೊಲೆ ಬೆದರಿಕೆ ಆರೋಪವಿದ್ದು, ಮನೆಯವರ ವಿರುದ್ಧ ಕೋಲಾರ ಎಸ್ಪಿ ಡಿ ದೇವರಾಜ್ಗೆ ಯುವತಿ ದೂರು ನೀಡಿದ್ದಾಳೆ.
ಪತಿ ಮೋಹನ್ ಅನ್ಯ ಜಾತಿಗೆ ಸೇರಿದ ಹಿನ್ನೆಲೆ ನಮ್ಮ ಮನೆಯವರಿಂದ ವಿರೋಧ ಮಾಡುತ್ತಿದ್ದು, ನಮಗೆ ಬದುಕಲು ರಕ್ಷಣೆ ನೀಡಬೇಕೆಂದು ನವಿತಾ ಮನವಿ ಮಾಡಿದ್ದಾರೆ.