ಕೋಲಾರ: ನಗರಸಭೆಯ 2ನೇ ವಾರ್ಡ್ನ ಜೆಡಿಎಸ್ ಟಿಕೆಟ್ ಆಕಾಂಕ್ಷಿಯೊಬ್ಬರು ಚುನಾವಣೆಯಲ್ಲಿ ಸ್ಪರ್ಧಿಸುವ ಮೊದಲು ಜನರ ಸಮಸ್ಯೆಗಳನ್ನ ತಿಳಿದುಕೊಳ್ಳಲು ಸಾರ್ವಜನಿಕ ಕುಂದು ಕೊರತೆ ಸಭೆ ಮಾಡಿದ್ದಾರೆ.
ಕೋಲಾರ ನಗರಸಭೆ ಚುನಾವಣೆ ಹಿನ್ನೆಲೆ: ಕುಂದು-ಕೊರತೆ ಸಭೆ ನಡೆಸಿದ ಜೆಡಿಎಸ್ ಟಿಕೆಟ್ ಆಕಾಂಕ್ಷಿ - ಕೋಲಾರದ ಗಾಂಧಿನಗರದಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆ
ಕೋಲಾರ ನಗರಸಭೆಯ 2ನೇ ವಾರ್ಡ್ನ ಜೆಡಿಎಸ್ ಟಿಕೆಟ್ ಆಕಾಂಕ್ಷಿಯೊಬ್ಬರು ಚುನಾವಣೆಯಲ್ಲಿ ಸ್ಪರ್ಧಿಸುವ ಮೊದಲು ಜನರ ಸಮಸ್ಯೆಗಳನ್ನ ತಿಳಿದುಕೊಳ್ಳಲು ಸಾರ್ವಜನಿಕ ಕುಂದು ಕೊರತೆ ಸಭೆ ಮಾಡಿದ್ದಾರೆ.
ಕೋಲಾರದ ಗಾಂಧಿನಗರದಲ್ಲಿ ಜನರು ಹಾಗೂ ಸ್ಥಳೀಯ ಮುಖಂಡರೊಂದಿಗೆ ಪ್ರವೀಣ್ ಗೌಡ ಸಭೆ ನಡೆಸುವ ಮೂಲಕ ತಾನೊಬ್ಬ ಆಕಾಂಕ್ಷಿ. ನಿಮ್ಮ ಸಮಸ್ಯೆಗಳನ್ನು ನಾನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡ್ತೀನಿ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಈಗಾಗಲೇ ಚುನಾವಣಾ ಪ್ರಚಾರ ಶುರು ಮಾಡಿಕೊಂಡಿದ್ದಾರೆ. ಕೆಲವು ದಿನಗಳಿಂದ ವಾರ್ಡ್ನಲ್ಲಿ ಕೆಲವು ಸಾಮಾಜಿಕ ಕೆಲಸ ಕಾರ್ಯ ಮಾಡುವ ಮೂಲಕ ಜನರೊಟ್ಟಿಗೆ ಗುರುತಿಸಿಕೊಂಡಿರುವ ಪ್ರವೀಣ್, ಇನ್ನೇನು ನಗರಸಭೆ ಚುನಾವಣೆಗಳು ಸನ್ನಿಹಿತ ಅನ್ನೋದು ತಿಳಿಯುತ್ತಿದ್ದಂತೆ ಅಖಾಡಕ್ಕೆ ಇಳಿದಿದ್ದಾರೆ.
ಇನ್ನು 7ನೇ ವಾರ್ಡ್ನಲ್ಲೂ ಕೂಡಾ ಟಿಕೆಟ್ ಆಕಾಂಕ್ಷಿ ಸುರೇಶ್ ಎಂಬುವರು ಆರೋಗ್ಯ ಶಿಬಿರ ಮಾಡುವ ಮೂಲಕ ಜನರೊಟ್ಟಿಗೆ ತಮ್ಮನ್ನು ಗುರುತಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಈ ಮೂಲಕ ಕೋಲಾರದಲ್ಲಿ ಲೋಕಲ್ ಎಲೆಕ್ಷನ್ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ.