ಕರ್ನಾಟಕ

karnataka

ETV Bharat / state

ಗ್ರಾಪಂ ಚುನಾವಣೆ: ಕೊತ್ತುರು ಮಂಜುನಾಥ್ ಬೆಂಬಲಿತ 45 ಅಭ್ಯರ್ಥಿಗಳ ಅವಿರೋಧ ಆಯ್ಕೆ - ಕೋಲಾರ ಸುದ್ದಿ

ಮುಳಬಾಗಿಲು ತಾಲೂಕಿನ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮಾಜಿ ಶಾಸಕ ಕೊತ್ತುರು ಮಂಜುನಾಥ್ ಬೆಂಬಲಿತ 45 ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

kottur Manjunath
ಕೊತ್ತುರು ಮಂಜುನಾಥ್

By

Published : Dec 21, 2020, 5:55 PM IST

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ರಂಗೇರಿದ್ದು, ಮಾಜಿ ಶಾಸಕ ಕೊತ್ತುರು ಮಂಜುನಾಥ್ ಬೆಂಬಲಿತ 45 ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶಾಸಕ ಕೊತ್ತುರು ಮಂಜುನಾಥ್

ಇನ್ನು ಈ ಬಗ್ಗೆ ಮಾತನಾಡಿದ ಮಾಜಿ ಶಾಸಕ ಕೊತ್ತೂರು ಮಂಜುನಾಥ್, ಮುಳಬಾಗಿಲು ತಾಲೂಕಿನಲ್ಲಿ ಅವಿರೋಧವಾಗಿ ಆಯ್ಕೆಯಾದ ಎಲ್ಲಾ ಸದಸ್ಯರನ್ನು ಅಭಿನಂದಿಸಿದ್ದಾರೆ. ತಾಲೂಕಿನ 470 ಗ್ರಾಮ ಪಂಚಾಯ್ತಿಗಳಲ್ಲಿಯೂ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಾಗಿ ಘೋಷಿಸಿದ್ದಾರೆ. ಆದರೆ ನಮ್ಮ ಅಭ್ಯರ್ಥಿಗಳನ್ನು ಕೆಲವು ಮುಖಂಡರು ನಮ್ಮವರು ಎಂದು ಅಪಪ್ರಚಾರ ಮಾಡಲು ಹೊರಟಿದ್ದಾರೆ ಎಂದು ಪರೋಕ್ಷವಾಗಿ ಸಚಿವ ನಾಗೇಶ್ ಹಾಗೂ ಜೆಡಿಎಸ್ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ನಾನು ಶಾಸಕನಾಗಿದ್ದ ವೇಳೆ ತಾಲೂಕಿನಲ್ಲಿ ಎಲ್ಲಾ ಪಂಚಾಯ್ತಿಯಲ್ಲಿ ಅಭಿವೃದ್ಧಿ ಕೆಲಸ ಮಾಡಿರುವೆ. ನನ್ನ ಸ್ವಂತ ನೆರವು ನೀಡಿ ಜನರ ಸಂಕಷ್ಟಕ್ಕೆ ಸ್ಪಂದಿಸಿರುವೆ. ಹೀಗಾಗಿ ನಾನು ಜನರ ಬಳಿ ಮತ ಕೇಳಲು ಹೊರಟಿದ್ದೇನೆ ಎಂದರು. ಮುಂದೆಯೂ ಇದೇ ಕ್ಷೇತ್ರದಲ್ಲಿ ಇರುವೆ. ನನಗೆ ಕ್ಷೇತ್ರದ ಜನತೆಯೇ ದೇವರುಗಳು ಎಂದ ಅವರು, ಕ್ಷೇತ್ರವನ್ನು ಬಿಡುವ ಮಾತೇ ಇಲ್ಲ ಎಂದರು.

ABOUT THE AUTHOR

...view details