ಕೋಲಾರ: ಜಿಲ್ಲೆಯ ಮುಳಬಾಗಿಲು ನಗರಸಭೆ ಅಧ್ಯಕ್ಷ - ಉಪಾಧ್ಯಕ್ಷ ಚುನಾವಣೆಯಲ್ಲಿ ಅಬಕಾರಿ ಸಚಿವ ಎಚ್.ನಾಗೇಶ್ ಕಿಂಗ್ ಮೇಕರ್ ಆಗಿ ಹೊರಹೊಮ್ಮಿದ್ದಾರೆ.
ಇಂದು ಮುಳಬಾಗಿಲು ನಗರಸಭೆಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಸಲುವಾಗಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆಸಲಾಗಿತ್ತು. ಅಲ್ಲದೇ ಮುಳಬಾಗಿಲು ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಜೆಡಿಎಸ್ನ ಸಮೃದ್ದಿ ಮಂಜುನಾಥ್ ನಡುವೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ನಿನ್ನೆ ಸಂಜೆಯವರೆಗೆ ಬಹುತೇಕ ಖಚಿತವಾಗಿತ್ತು. ಆದರೆ ಬಿಜೆಪಿಯಿಂದ ಓರ್ವ ಸದಸ್ಯನನ್ನ ಹೊಂದಿದ್ದ ಸಚಿವ ನಾಗೇಶ್, ಇಬ್ಬರು ಮುಖಂಡರ ಲೆಕ್ಕಾಚಾರಗಳನ್ನ ತಲೆಕೆಳಗಾಗುವಂತೆ ಮಾಡಿ ನಗರಸಭೆ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದ್ದಾರೆ.
ಮುಳಬಾಗಿಲು ನಗರ ಸಭೆಯ ಒಟ್ಟು 31 ಸ್ಥಾನಗಳಲ್ಲಿ, ಜೆಡಿಎಸ್ 11, ಕಾಂಗ್ರೆಸ್ 7, ಬಿಜೆಪಿ 2, ಎಸ್ಡಿಪಿಐ 2, ಸ್ವತಂತ್ರ 9 ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದಿದ್ದರು. ಈ ವೇಳೆ, ಸಮೃದ್ದಿ ಮಂಜುನಾಥ್ ಬೆಂಬಲಿತ ಜೆಡಿಎಸ್ನ 11 ಸದಸ್ಯರಿದ್ದರೆ. ಕಾಂಗ್ರೆಸ್ ಸ್ವತಂತ್ರ ಹಾಗೂ ಒಬ್ಬ ಬಿಜೆಪಿ ಬೆಂಬಲಿತ ಕೊತ್ತೂರು ಮಂಜುನಾಥ್ ಬಣದವರ ನಡುವೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಬಹುತೇಕ ಖಚಿತವಾಗಿತ್ತು.