ಕರ್ನಾಟಕ

karnataka

ETV Bharat / state

ಅಧಿಕಾರಿಗಳಷ್ಟೇ ಅಲ್ಲ, ಮತದಾರರೂ ಭ್ರಷ್ಟರೇ: ಎಂಟಿಬಿ ನಾಗರಾಜ್‌ - ಹೂಡಿ ವಿಜಯ್​ ಕುಮಾರ್​ ಕಚೇರಿ ಉದ್ಘಾಟನೆ ಕಾರ್ಯಕ್ರಮ

ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಎಂಟಿಬಿ ನಾಗರಾಜ್, ರಾಜಕೀಯ ಕಳ್ಗಚ್ಚು ರೀತಿ ಆಗಿದೆ. ಸೇವೆ ಮಾಡುವ ಮನೋಭಾವ ಕಡಿಮೆಯಾಗಿದೆ. ಎರಡು ಪಕ್ಷದವರು ಮಾಡಿದಕ್ಕಿಂತ ದುಪ್ಪಟ್ಟು ಹಣ ಚುನಾವಣೆಯಲ್ಲಿ ನಾನು ಖರ್ಚು ಮಾಡಿದ್ದೇನೆ. ಮೊದಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ಭ್ರಷ್ಟರಾಗಿದ್ದರು. ಈಗ ಮತದಾರರೂ ಭ್ರಷ್ಟರಾಗಿದ್ದಾರೆ ಎಂದು ಎಂಟಿಬಿ ನಾಗರಾಜ್​ ಸೋಲಿನ ನೋವು ತೋಡಿಕೊಂಡರು.

mtb-nagaraj-statement-on-voters-in-hudi-vijayakumar-office-inauguration
ಎಂಟಿಬಿ ನಾಗರಾಜ

By

Published : Jan 20, 2020, 6:31 AM IST

ಕೋಲಾರ :ರಾಜಕೀಯ ಕಳ್ಗಚ್ಚು ರೀತಿ ಆಗಿದೆ. ಸೇವೆ ಮಾಡುವ ಮನೋಭಾವ ಕಡಿಮೆಯಾಗಿದೆ. ಎರಡು ಪಕ್ಷದವರು ಮಾಡಿದ್ದಕ್ಕಿಂತ ದುಪ್ಪಟ್ಟು ಹಣ ಚುನಾವಣೆಯಲ್ಲಿ ನಾನು ಖರ್ಚು ಮಾಡಿದ್ದೇನೆ. ಮತದಾರರೂ ಕೂಡಾ ಭ್ರಷ್ಟರಾಗಿದ್ದಾರೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್​ ಆತ್ಮಾವಲೋಕನ ಮಾಡಿಕೊಂಡರು.

ಹೂಡಿ ವಿಜಯ್ ಕುಮಾರ್ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಂಟಿಬಿ ನಾಗರಾಜ್ ಮಾತನಾಡಿದ್ರು.

ಮೊದಲಿಗೆ ಪೌರತ್ವ ಕಾಯ್ದೆಯ ಬಗ್ಗೆ ನನಗೂ ಅಷ್ಟೊಂದು ಅರಿವಿರಲಿಲ್ಲ, ಯಾಕಂದ್ರೆ ನಾನು ಕಾಂಗ್ರೆಸ್​ನ ಸಂಸ್ಕೃತಿಯಲ್ಲಿ ಬೆಳೆದವನು, ಮುಂದೆ ಬಿಜೆಪಿಯ ಆಚಾರ ವಿಚಾರಗಳಿಗೆ ನಾನು ಹೊಂದಿಕೊಳ್ಳುತ್ತೇನೆ ಎಂದರು. ರಾಜಕೀಯ ಇವತ್ತು ವ್ಯಾಪಾರ ಆಗಿರೋದು ಬೇಸರ ತಂದಿದೆ ಎಂದರು.

ಅಧಿಕಾರಿಗಳು ಅಷ್ಟೆ ಅಲ್ಲ ಮತದಾರರೂ ಬ್ರಷ್ಟರೇ ಎಂಟಿಬಿ ನಾಗರಾಜ ಆತ್ಮಾವಲೋಕನ

ಬಿಜೆಪಿ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ ಮಾತನಾಡಿ, ಪೌರತ್ವ ಕಾಯ್ದೆ ಕಿತ್ತುಕೊಳ್ಳುವ ಕಾಯ್ದೆಯಲ್ಲ, ಬದಲಾಗಿ ಇದು ಪೌರತ್ವ ಕೊಡುವ ಕಾಯ್ದೆ. 370 ನೇ ವಿಧಿ ರದ್ದು ಹಾಗೂ ಪೌರತ್ವ ಕಾಯ್ದೆಯನ್ನು ವಿರೋಧಿಸುವ ಮೂಲಕ ಪಾಕಿಸ್ತಾನದ ಪರವಾಗಿ ಅರೆಬುದ್ದಿಜೀವಿಗಳು ನಿಲ್ಲುತ್ತಿದ್ದಾರೆ ಎಂದು ಆರೋಪಿಸಿದರು.

ABOUT THE AUTHOR

...view details