ಕೋಲಾರ:ಅನರ್ಹ ಶಾಸಕ ಎಂಟಿಬಿ ನಾಗರಾಜ್ ಕುಟುಂಬ ಸಮೇತರಾಗಿ ಮುಳಬಾಗಿಲು ತಾಲೂಕಿನ ಕುರುಡುಮಲೆ ಗಣಪ ದೇವಾಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಕುರುಡುಮಲೆ ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿದ ಎಂಟಿಬಿ ಕುಟುಂಬ - ಅನರ್ಹ ಶಾಸಕ ಎಂಟಿಬಿ ನಾಗರಾಜ್
ಇಂದು ಬಿಜೆಪಿಗೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಸೇರ್ಪಡೆಯಾಗಿದ್ದು, ಅವರ ಪತ್ನಿ ಶಾಂತಮ್ಮ, ಸೊಸೆ ಮಂಜುಳಾ ಮತ್ತು ಕುಟುಂಬ ಸಮೇತರಾಗಿ ಕುರುಡುಮಲೆ ಪಂಚಮುಖಿ ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಎಂಟಿಬಿ ಕುಟುಂಬ
ಇಂದು ಎಂಟಿಬಿ ನಾಗರಾಜ್ ಬಿಜೆಪಿ ಸೇರಿದ್ದರೆ, ಅತ್ತ ಅವರ ಪತ್ನಿ ಶಾಂತಮ್ಮ, ಸೊಸೆ ಮಂಜುಳಾ ಅವರು ಕುಟುಂಬ ಸಮೇತರಾಗಿ ಪಂಚಮುಖಿ ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇಂದು ಶುಭ ದಿನವಾದ್ದರಿಂದ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಲಿರುವ ಎಂಟಿಬಿ, 18ನೇ ತಾರೀಖು ಮತ್ತೊಮ್ಮೆ ಬೃಹತ್ ಜಾಥದೊಂದಿಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.