ಕರ್ನಾಟಕ

karnataka

ETV Bharat / state

ಅಂತರಗಂಗೆಯಲ್ಲಿ ಕೋತಿಗಳಿಗೆ ಆಹಾರ ನೀಡಿದ ಸಂಸದ - ಅಂತರಗಂಗೆಯಲ್ಲಿ ಕೋತಿಗಳಿಗೆ ಆಹಾರ ವಿತರಿಸಿದ ಸಂಸದ ಎಸ್.ಮುನಿಸ್ವಾಮಿ

ಲಾಕ್​​​​​ಡೌನ್ ನಿಂದಾಗಿ ಅಂತರಗಂಗೆಯಲ್ಲಿ ಆಹಾರವಿಲ್ಲದೇ ಪರಾಡುತ್ತಿದ್ದ ಕೋತಿಗಳಿಗೆ ಹಣ್ಣು-ಹಂಪಲು ಹಾಗೂ ಊಟ ನೀಡಿ ಸಂಸದ ಎಸ್.ಮುನಿಸ್ವಾಮಿ ಮಾನವೀಯತೆ ಮೆರೆದರು.

MP S. Muniswamy  distribution food to monkey
ಅಂತರಗಂಗೆಯಲ್ಲಿ ಕೋತಿಗಳಿಗೆ ಆಹಾರ ವಿತರಿಸಿದ ಸಂಸದ ಎಸ್.ಮುನಿಸ್ವಾಮಿ

By

Published : Apr 6, 2020, 6:48 PM IST

ಕೋಲಾರ:ಲಾಕ್ ಡೌನ್ ನಿಂದಾಗಿ ದಕ್ಷಿಣ ಕಾಶೀ ಎಂದೇ ಹೆಸರಾಗಿರುವ ಕೋಲಾರ ಹೊರವಲಯದಲ್ಲಿರುವ ಅಂತರಗಂಗೆಯಲ್ಲಿ, ಸಾವಿರಾರು ಕೋತಿಗಳು ಆಹಾರವಿಲ್ಲದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಇಂದು ಅಂತರಗಂಗೆಗೆ ಭೇಟಿ ನೀಡಿದ ಸಂಸದ ಎಸ್.ಮುನಿಸ್ವಾಮಿ ಕೋತಿಗಳಿಗೆ ಬಾಳೆ ಹಣ್ಣು, ಕಲ್ಲಂಗಡಿ ಹಾಗೂ ಅನ್ನ ನೀಡುವುದರ ಮೂಲಕ ಮಾನವೀಯತೆ ಮೆರೆದರು.

ಅಂತರಗಂಗೆಯಲ್ಲಿ ಕೋ ಅಂತರಗಂಗೆಯಲ್ಲಿ ಕೋತಿಗಳಿಗೆ ಆಹಾರ ವಿತರಿಸಿದ ಸಂಸದ ಎಸ್.ಮುನಿಸ್ವಾಮಿತಿಗಳಿಗೆ ಆಹಾರ ವಿರಿಸಿದ ಸಂಸದ ಎಸ್.ಮುನಿಸ್ವಾಮಿ

ಪ್ರವಾಸಿಗರ ಹಾಗೂ ಚಾರಣಿಗರ ನೆಚ್ಚಿನ ಸ್ಥಳವಾಗಿರುವ ಅಂತರಗಂಗೆಗೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಿದ್ದು, ಕೋತಿಗಳಿಗೆ ಆಹಾರ ನೀಡುತ್ತಿದ್ದರು. ಆದ್ರೆ ಲಾಕ್​ಡೌನ್​ ಹಿನ್ನೆಲೆ ಈ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರಿಂದ ಜನ ಸಂದಣಿ ಇಲ್ಲದ ಪರಿಣಾಮ ಕೋತಿಗಳು ಆಹಾರಕ್ಕಾಗಿ ಪರದಾಡುವಂತಾಗಿತ್ತು. ಇದನ್ನರಿತ ಸಂಸದರು ಕೋತಿಗಳಿಗೆ ಹಣ್ಣು ಆಹಾರವನ್ನ ನೀಡುವುದರೊಂದಿಗೆ ನಿತ್ಯ ಆಹಾರ ನೀಡುವುದಾಗಿ ತಿಳಿಸಿದ್ರು.

ಅಂತರಗಂಗೆಯಲ್ಲಿ ಕೋತಿಗಳಿಗೆ ಆಹಾರ ವಿತರಿಸಿದ ಸಂಸದ ಎಸ್.ಮುನಿಸ್ವಾಮಿ

ಅಲ್ಲದೇ ಕಡು ಬಡವರಿಗೆ, ನಿರ್ಗತಿಕರಿಗೆ ಆಹಾರ ನೀಡಲು ಮುಂದಾಗಿರುವ ಸಂಸದರು, ಆಹಾರ ಸಾಮಗ್ರಿಗಳನ್ನ ಪರಿಶೀಲನೆ ಮಾಡಿದರು. ಜೊತೆಗೆ ಉಚಿತ ಮಾಸ್ಕ್ ನೀಡಲು ನಿರ್ಧರಿಸಿರುವ ಅವರು ಮಾಸ್ಕ್ ತಯಾರಿಸುವ ಗಾರ್ಮೆಂಟ್ಸ್​ಗೆ ಭೇಟಿ ನೀಡಿ ಸುಮಾರು 5 ಸಾವಿರ ಬಟ್ಟೆ ಮಾಸ್ಕ್ ಗಳಿಗೆ ಆರ್ಡರ್ ಮಾಡಿದ್ರು.

ABOUT THE AUTHOR

...view details