ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಬಳಸಿದ ಕ್ರಾಸ್ ಎಂಬ ಪದ ಅವರ ವಯಸ್ಸಿಗೆ ತಕ್ಕಂತ ಮಾತಲ್ಲ: ಸಂಸದ ಮುನಿಸ್ವಾಮಿ - MP S. Muniswami news

ಸಿದ್ದರಾಮಯ್ಯ ಅವರು ಕ್ರಾಸ್ ಎಂಬ ಪದ ಬಳಸಿರುವುದು ಅವರ ವಯಸ್ಸಿಗೆ, ಹಿರಿತನಕ್ಕೆ ತಕ್ಕಂತಹ ಮಾತಲ್ಲ. ಈ ರೀತಿಯ ಹೇಳಿಕೆಗಳನ್ನು ಅವರು ನೀಡಬಾರದು ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

kolar
ಸಂಸದ ಎಸ್.ಮುನಿಸ್ವಾಮಿ

By

Published : Dec 9, 2020, 12:29 PM IST

ಕೋಲಾರ:ಸಿದ್ದರಾಮಯ್ಯ ಅವರು ಕ್ರಾಸ್ ಎಂಬ ಪದ ಬಳಕೆ ಮಾಡಿರುವುದು ಅವರ ವಯಸ್ಸಿಗೆ ತಕ್ಕದಾದುದಲ್ಲ ಎಂದು ಕೋಲಾರದಲ್ಲಿ ಸಂಸದ ಎಸ್. ಮುನಿಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಹೇಳಿಕೆಗೆ ಸಂಸದ ಮುನಿಸ್ವಾಮಿ ಪ್ರತಿಕ್ರಿಯಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಹಿರಿಯರಾಗಿದ್ದು ಈ ರೀತಿಯ ಹೇಳಿಕೆಗಳನ್ನು ನೀಡಬಾರದು. ಕ್ರಾಸ್ ಎಂಬ ಪದವನ್ನು ಪ್ರಾಣಿಗಳಿಗೆ ಬಳಸುತ್ತಾರೆ. ಆದ್ರೆ ಸಿದ್ದರಾಮಯ್ಯ ಅವರು ಮತಗಳ ಓಲೈಕೆಗಾಗಿ, ಓಟ್ ಬ್ಯಾಂಕಿಗೋಸ್ಕರ ಈ ಪದವನ್ನು ಬಳಸಿದ್ದಾರೆ. ಹಿರಿಯರಾದ ಅವರು ಮುಂದೆ ಮಾತನಾಡುವಾಗ ಯೋಚಿಸಿ ಮಾತನಾಡಲಿ ಎಂದು ಸಲಹೆ ನೀಡಿದರು.

ಪದೇ ಪದೆ ಪ್ರತಿಭಟನೆ, ಬಂದ್ ಮಾಡಬೇಡಿ: ರೈತರಿಗೆ ಸಿಎಂ ಮನವಿ

ಇಡೀ ದೇಶದಲ್ಲಿ ಯಾರು ಕ್ರಾಸಿಂಗ್ ಇಲ್ಲ, ಮತದಾರರನ್ನು ಸೆಳೆಯಲು ಈ ರೀತಿ ಹೇಳಿಕೆ ನೀಡಬಾರದು ಎಂದು ಸಂಸದ ಮುನಿಸ್ವಾಮಿ ಒತ್ತಾಯಿಸಿದರು.

ABOUT THE AUTHOR

...view details