ಕರ್ನಾಟಕ

karnataka

ETV Bharat / state

ಕುಂಕುಮ ಇಡದ ಮಹಿಳೆ ಮೇಲೆ ಗದರಿದ ಸಂಸದ ಮುನಿಸ್ವಾಮಿ: ಬಿಜೆಪಿ ವಿರುದ್ಧ ಕಾಂಗ್ರೆಸ್​​​ ಟ್ವೀಟ್​ ಆಕ್ರೋಶ

ಸಂಸದರು ತಾವು ಗದರಿದ ಮಹಿಳೆಯ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿ ಇಂದು ಕೋಲಾರದಲ್ಲಿ ಕಾಂಗ್ರೆಸ್​ ಮಹಿಳಾ ಕಾರ್ಯಕರ್ತರು ಹಾಗೂ ಇತಹ ಮಹಿಳಾ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

MP Muniswamy scolded woman for not putting kumkum
ಕುಂಕುಮ ಇಡದ ಮಹಿಳೆ ಮೇಲೆ ಗದರಿದ ಸಂಸದ ಮುನಿಸ್ವಾಮಿ

By

Published : Mar 9, 2023, 6:02 PM IST

Updated : Mar 9, 2023, 6:59 PM IST

ಕುಂಕುಮ ಇಡದ ಮಹಿಳೆಗೆ ಗದರಿದ ಸಂಸದ ಮುನಿಸ್ವಾಮಿ ವಿರುದ್ಧ ಪ್ರತಿಭಟನೆ

ಕೋಲಾರ: ನಿನ್ನೆ ಮಹಿಳಾ ದಿನಾಚರಣೆ ಕಾರ್ಯಕ್ರಮವೊಂದರಲ್ಲಿ ಕೋಲಾರ ಜಿಲ್ಲೆಯ ಸಂಸದ ಎಸ್​ ಮುನಿಸ್ವಾಮಿ, ಹಣೆಗೆ ಕುಂಕುಮ ಇಡದ ಹಿನ್ನೆಲೆ ಮಹಿಳೆಯೊಬ್ಬರ ಮೇಲೆ ರೇಗಿದ್ದ ಪ್ರಸಂಗ ನಡೆದಿತ್ತು. ಸಂಸದ ಮಹಿಳೆ ಮೇಲೆ ಗದರಿರುವ ವಿಡಿಯೋ ವೈರಲ್​ ಆಗುತ್ತಿದ್ದಂತೆ ಬಿಜೆಪಿ ಸಂಸದನನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ.

ಮಹಿಳೆಗೆ ಬಿಜೆಪಿ ಸಂಸದ ಬಯ್ಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿರುವ ಕಾಂಗ್ರೆಸ್​, 'ಹಣೆಗೆ ಕುಂಕುಮ ಯಾಕಿಟ್ಟಿಲ್ಲ, ಗಂಡ ಬದುಕಿದಾನೆ ತಾನೇ' ಎಂದು ಬಿಜೆಪಿ ಸಂಸದ ಮುನಿಸ್ವಾಮಿ ಮಹಿಳೆಗೆ ಅವಮಾನಿಸಿದ್ದು, ಇದುವೇ ಬಿಜೆಪಿಯ ಮಹಿಳಾ ವಿರೋಧಿ ನೀತಿಗೆ ಸಾಕ್ಷಿ. ಮಹಿಳೆಯರ ಸ್ವಾತಂತ್ರ್ಯ ಕಸಿಯಲು, ಅವರ ಉಡುಗೆ ತೊಡುಗೆ ನಿರ್ಧರಿಸಲು ಬಿಜೆಪಿಗೆ ಯಾವ ಹಕ್ಕಿದೆ? ಮಹಿಳಾ ದಿನದಂದೇ ಮಹಿಳೆಗೆ ಅವಮಾನಿಸಿ ವಿಕೃತಿ ಮೆರೆದಿದೆ ಎಂದು ದೂರಿದೆ.

ಬಿಜೆಪಿ ಸಂಸದರು ಮಹಿಳೆಯರಿಗೆ ಕುಂಕುಮ ಯಾಕಿಟ್ಟಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ, ಜನರನ್ನು ಪ್ರಶ್ನಿಸುವ ಮೊದಲು, ಬಿಜೆಪಿ ಜನರ ಪ್ರಶ್ನೆಗಳಿಗೆ ಉತ್ತರಿಸಲಿ. ರಾಜ್ಯದಲ್ಲಿನ ನೆರೆ ಪರಿಹಾರಕ್ಕೆ ಕೇಂದ್ರವನ್ನು ಯಾಕೆ ಒತ್ತಾಯಿಸಿಲ್ಲ? ಬಾಕಿ ಇರುವ ಜಿಎಸ್​ಟಿಯನ್ನು ಯಾಕೆ ಕೇಳಲಿಲ್ಲ? ಕರ್ನಾಟಕಕ್ಕೆ, ಕನ್ನಡಕ್ಕೆ ಅನ್ಯಾಯವಾದಾಗ ಯಾಕೆ ಬಿಜೆಪಿ ನಾಯಕರು ದನಿ ಎತ್ತಲಿಲ್ಲ? ಎಂಬ ಪ್ರಶ್ನೆಗಳಿಗೆ ಮೊದಲು ಉತ್ತರಿಸಲಿ. ನಂತರ ಮಹಿಳೆಯರ ಸ್ವಾತಂತ್ರ್ಯ ಕಸಿಯುವ, ಅವರ ಉಡುಗೆ, ತೊಡುಗೆ ಬಗ್ಗೆ ಪ್ರಶ್ನೆ ಮಾಡಿ, ಗದರುವ ಕೆಲಸ ಮಾಡಲಿ ಎಂದು ಖಾರವಾಗಿ ಹೇಳಿದೆ.

ಏನಿದು ಘಟನೆ?:ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ ವತಿಯಿಂದ ಮಹಿಳಾ ದಿನಾಚರಣೆ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಂಸದ ಎಸ್. ಮುನಿಸ್ವಾಮಿ ಭಾಗವಹಿಸಿದ್ದರು. ಈ ವೇಳೆ, ರಂಗಮಂದಿರದ ಬಳಿ ಮಾರಾಟ ಮಳಿಗೆಯನ್ನು ತೆರೆದಿದ್ದ ಮುಳಬಾಗಿಲು ಮೂಲದ ಮಹಿಳೆ ಹಣೆಗೆ ಸಿಂಧೂರ ಇಡದ ಹಿನ್ನಲೆ ಮಹಿಳಾ ದಿನಾಚರಣೆಯಲ್ಲಿಯೇ ಮಹಿಳೆ‌ ವಿರುದ್ಧ ಸಂಸದ ಮುನಿಸ್ವಾಮಿ ರೇಗಿದ್ದ ವಿಡಿಯೋ ವೈರಲ್ ಆಗಿತ್ತು. ಇದೇ ವೇಳೆ ಮಹಿಳೆ ಸಂಸದರ ಪ್ರಶ್ನೆಗೆ ಉತ್ತರಿಸಲಾಗದೇ ಮಹಿಳೆ ತಡಬಡಾಯಿಸಿ ಪೇಚಿಗೆ ಒಳಗಾಗಿದ್ರು. ಆಗ ಜೊತೆಯಲ್ಲಿ ಇದ್ದ ಶಾಸಕ ಶ್ರೀನಿವಾಸಗೌಡ ಬೇರೆ ಕಾರಣ ಇರಬಹುದು ಬಿಡಪ್ಪ ಎಂದರು. ಜೊತೆಗೆ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಕೂಡ ಸಮಾಧಾನಿಸಲು ಯತ್ನಿಸಿದರು ಎಂದು ವರದಿಯಾಗಿತ್ತು.

ಸಂಸದನ ವಿರುದ್ಧ ಮಹಿಳಾ ಸಂಘಟನೆಗಳಿಂದ ಪ್ರತಿಭಟನೆ:ಸಂಸದ ಎಸ್.ಮುನಿಸ್ವಾಮಿ ವಿರುದ್ಧ ಕೋಲಾರ ಮೆಕ್ಕೆ ವೃತ್ತದಲ್ಲಿ ಕಾಂಗ್ರೇಸ್ ಮಹಿಳಾ ಕಾರ್ತಕರ್ತರು ಹಾಗೂ ವಿವಿಧ ಮಹಿಳಾ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಎಸ್. ಮುನಿಸ್ವಾಮಿ ಅವರು ಮಹಿಳೆಯನ್ನು ಅವಮಾನಿಸಿದ್ದು, ಮಹಿಳೆ ಜೊತೆ ಕ್ಷಮೆ ಕೇಳುವಂತೆ ಒತ್ತಾಯ ಮಾಡಿದ್ದಾರೆ. ಅಲ್ಲದೆ ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದ್ದ ಹಿನ್ನೆಲೆ ಪ್ರತಿಭಟನಾನಿರತ ಮಹಿಳಾ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು.

ಇದನ್ನೂ ಓದಿ:ಬಿಜೆಪಿ- ಕಾಂಗ್ರೆಸ್ ಎರಡೂ ಪಕ್ಷಗಳು ಜನರ ಬದುಕಿನ ಜೊತೆ ಚೆಲ್ಲಾಟವಾಡುತ್ತಿವೆ: ಹೆಚ್​ಡಿಕೆ

Last Updated : Mar 9, 2023, 6:59 PM IST

ABOUT THE AUTHOR

...view details