ಕೋಲಾರ: ಸಚಿವ ಸಂಪುಟದಲ್ಲಿ ಮಂತ್ರಿಗಿರಿ ಕೊಡುವಂತಹ ಅಧಿಕಾರ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಸೇರಿದಂತೆ, ಬಿಜೆಪಿಯ ಮುಖಂಡರಿಗೆ ಬಿಟ್ಟ ವಿಚಾರ ಎಂದು ಸಂಸದ ಮುನಿಸ್ವಾಮಿ ಹೇಳಿದ್ದಾರೆ.
ಮಂತ್ರಿಗಿರಿ ಕೊಡಿ, ಕೊಡಬೇಡಿ ಎನ್ನುವ ಅಧಿಕಾರ ನಮಗಿಲ್ಲ: ಸಂಸದ ಮುನಿಸ್ವಾಮಿ - ಬಿಜೆಪಿ ಹೈಕಮಾಂಡ್
ಯಡಿಯೂರಪ್ಪ ಅವರ ವಿರುದ್ದ ಸಿಡಿ ಬಿಡುಗಡೆ ಮಾಡಲಾಗುತ್ತದೆ ಎನ್ನುವ ಪ್ರತಿ ಪಕ್ಷದವರ ಹೇಳಿಕೆಗೆ ಸಂಸದ ಮುನಿಸ್ವಾಮಿ ಪ್ರತಿಕ್ರಿಯಿಸಿ, ಅವರು ಬಾಯಿ ಚಪಲಕ್ಕಾಗಿ ಈ ರೀತಿಯ ಹೇಳಿಕೆಗಳನ್ನ ನೀಡುತ್ತಿದ್ದಾರೆಂದು ಗುಡುಗಿದರು.
ಮುಳಬಾಗಿಲಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಅವರಿಗೆ ಮಂತ್ರಿಗಿರಿ ಕೊಡಿ, ಕೊಡಬೇಡಿ ಎನ್ನುವ ಅಧಿಕಾರ ನಮಗಿಲ್ಲ, ಅದು ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟ ವಿಚಾರ. ವರಿಷ್ಟರು ತೆಗೆದುಕೊಂಡಿರುವ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.
ಯಡಿಯೂರಪ್ಪ ಅವರ ವಿರುದ್ದ ಸಿಡಿ ಬಿಡುಗಡೆ ಮಾಡಲಾಗುತ್ತದೆ ಎನ್ನುವ ಪ್ರತಿ ಪಕ್ಷದವರ ಹೇಳಿಕೆಗೆ ಟಾಂಗ್ ನೀಡಿದ ಮುನಿಸ್ವಾಮಿ, ಅವರು ಬಾಯಿ ಚಪಲಕ್ಕಾಗಿ ಈ ರೀತಿಯ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಇಂತಹ ಬ್ಲ್ಯಾಕ್ ಮೇಲ್ ಗಳಿಗೆ ಯಡಿಯೂರಪ್ಪ ಹೆದರುವುದಿಲ್ಲ, ಅವರು ಮೊದಲಿನಿಂದಲೂ ಒಳ್ಳೆಯ ಮುಖ್ಯಮಂತ್ರಿ, ರೈತ ನಾಯಕರು. ಯಡಿಯೂರಪ್ಪ ಗುಡುಗಿದರೆ ವಿಧಾನ ಸೌಧ ನಡುಗುವುದು ಎನ್ನುವಂತೆ ಈಗಲೂ 79 ವರ್ಷಗಳಾದರೂ, ಅದೇ ಗತ್ತಿನಲ್ಲಿ ಸರ್ಕಾರ ನಡೆಸುತ್ತಿದ್ದಾರೆ ಎಂದು ಹೇಳಿದರು.