ಕರ್ನಾಟಕ

karnataka

ETV Bharat / state

ಉಪ್ಪು ತಿಂದವರು ನೀರು ಕುಡಿಯಲೇಬೇಕು, ಹಾಗೆಯೇ ಜಮಿರ್ ಅಹ್ಮದ್ ಆಗಲಿ : ಸಂಸದ ಮುನಿಸ್ವಾಮಿ - ಜಮೀರ್​ ವಿಚಾರವಾಗಿ ಮುನಿಸ್ವಾಮಿ ಹೇಳಿಕೆ

ಅವರೇನು ತಪ್ಪು ಮಾಡಿದ್ದಾರೆ, ಅವರ ಸಂಗಡಿಗರು ಸೇರಿ ಎಲ್ಲೆಲ್ಲಿ ಹೋಗಿದ್ರು ಅಂತಾ ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿದ್ದೇವೆ ಎಂದ್ರು. ಉಪ್ಪು ತಿಂದವನು ನೀರು ಕುಡಿಯಲೇಬೇಕು, ಹಾಗೆಯೇ ಜಮಿರ್ ಅಹ್ಮದ್ ಆಗಲಿ, ಯಾವುದೇ ಪಕ್ಷದವರಾಗಲಿ, ಅವರ ವಿರುದ್ಧ ಬಿಜೆಪಿ ಸರ್ಕಾರ ನಿರ್ದಾಕ್ಷ್ಯಿಣ್ಯ ಕ್ರಮಕೈಗೊಳ್ಳುತ್ತೆ..

mp muniswamy reaction about jamir ahmed drug alligation
ಸಂಸದ ಮುನಿಸ್ವಾಮಿ

By

Published : Sep 11, 2020, 4:43 PM IST

ಕೋಲಾರ: ಜಮೀರ್ ಅಹ್ಮದ್ ಅವರ ಹೇಳಿಕೆಗಳಿಗೆ ಹೆಚ್ಚು ಬೆಲೆ ಕೊಡಲು ಆಗುವುದಿಲ್ಲ ಎಂದು ಕೋಲಾರದಲ್ಲಿ ಸಂಸದ ಎಸ್ ಮುನಿಸ್ವಾಮಿ ಹೇಳಿದ್ರು.

ಕೋಲಾರ ಸಂಸದ ಮುನಿಸ್ವಾಮಿ
ರಾಜ್ಯದಲ್ಲಿ ಸುದ್ದಿಯಲ್ಲಿರುವ ಡ್ರಗ್ಸ್ ಹೇಳಿಕೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದರು, ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾದ್ರೆ ನಾನು ಅವರ ಮನೆಯ ವಾಚ್‌ಮೆನ್ ಆಗಿ ಕೆಲಸ ಮಾಡುವೆ ಎಂದು ಜಮೀರ್ ತಿಳಿಸಿದ್ರು. ಹೀಗಾಗಿ, ಮೊದಲು ಯಡಿಯೂರಪ್ಪ ಅವರ ಮನೆಗೆ ವಾಚ್‌ಮೆನ್ ಆಗಿ ಕೆಲಸ ಮಾಡಲಿ ಎಂದರು.
ಇನ್ನು, ಅವರೇನು ತಪ್ಪು ಮಾಡಿದ್ದಾರೆ, ಅವರ ಸಂಗಡಿಗರು ಸೇರಿ ಎಲ್ಲೆಲ್ಲಿ ಹೋಗಿದ್ರು ಅಂತಾ ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿದ್ದೇವೆ ಎಂದ್ರು.ಉಪ್ಪು ತಿಂದವನು ನೀರು ಕುಡಿಯಲೇಬೇಕು, ಹಾಗೆಯೇ ಜಮಿರ್ ಅಹ್ಮದ್ ಆಗಲಿ, ಯಾವುದೇ ಪಕ್ಷದವರಾಗಲಿ, ಅವರ ವಿರುದ್ಧ ಬಿಜೆಪಿ ಸರ್ಕಾರ ನಿರ್ದಾಕ್ಷ್ಯಿಣ್ಯ ಕ್ರಮಕೈಗೊಳ್ಳುತ್ತೆ ಎಂದರು.

ಅಲ್ಲದೆ ಜಮೀರ್ ಅಹ್ಮದ್ ಹೆಚ್ಚಿಗೆ ಮಾತನಾಡಿದಾಗಲೆಲ್ಲ ತಗಲ್ಹಾಕಿ ಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ರು. ಅಲ್ಲದೆ ಅವರ ಆಸ್ತಿಯನ್ನು ಕೋಲಾರದ ಬಡ ಜನತೆಗೆ ನೀಡಲಿ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಅವರ ಕಾಲೆಳೆದ್ರು.

For All Latest Updates

ABOUT THE AUTHOR

...view details