ಕೋಲಾರ :ಚೀನಾ ಮತ್ತು ಕಮ್ಯುನಿಸ್ಟ್ ಸರ್ಕಾರಗಳಿರುವ ಕಡೆ ಎಲ್ಲಾ ಕಂಪನಿಗಳು ಮುಚ್ಚಿರುವ ಉದಾಹರಣೆಗಳೇ ಹೆಚ್ಚಾಗಿರುವುದು ಎಂದು ಸಂಸದ ಮುನಿಸ್ವಾಮಿ ಹೇಳಿದ್ದಾರೆ.
ಭಾರತದಲ್ಲಿನ ಕೈಗಾರಿಕೆ ಬೆಳವಣಿಗೆ ಕುರಿತು ಚೀನಾ ಮಾಧ್ಯಮಗಳಲ್ಲಿ ಸುದ್ದಿಯಾಗಿರುವುದರ ಕುರಿತು ಪ್ರತಿಕ್ರಿಯಿದ ಅವರು, ಚೀನಾ ಹಾಗೂ ಕಮ್ಯುನಿಸ್ಟ್ ಸರ್ಕಾರವಿರುವ ಕಡೆ ಕಂಪನಿಗಳನ್ನು ಮುಚ್ಚಿದ್ದಾರೆಯೇ ಹೊರತು, ಉದ್ಘಾಟನೆ ಮಾಡಿದ ಉದಾಹರಣೆಗಳಿಲ್ಲ. ನಮ್ಮ ದೇಶದ ಪ್ರಧಾನಿಗಳು ಮತ್ತು ನಮ್ಮ ರಾಜ್ಯದ ಮುಖ್ಯಮಂತ್ರಿ ಕೈಗಾರಿಕೆಗಳಿಗೆ ಅಭಯ ನೀಡಿದ್ದಾರೆ.
ಅಲ್ಲದೆ, ನಾವು ಕಂಪನಿಗಳ ಪರ ಹಾಗೂ ಸರ್ಕಾರ ಕಾರ್ಮಿಕರ ಪರವಾಗಿದೆ. ಕಂಪನಿ ಮತ್ತು ಹೂಡಿಕೆದಾರರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. ನಮ್ಮ ಪ್ರಧಾನಿಗಳ ಮೇಲೆ ಹೂಡಿಕೆದಾರರಿಗೆ ಹಾಗೂ ಕಂಪನಿಗಳಿಗೆ ನಂಬಿಕೆಯಿದೆ. ಭಾರತದಲ್ಲಿ ಸಣ್ಣ-ಪುಟ್ಟ ಘಟನೆಗಳು ಆದಾಗ ಚೀನಾದವರು ಭಾರತಕ್ಕೆ ಕಪ್ಪು ಚುಕ್ಕೆ ಬರುವಂತೆ ಹೇಳಿಕೆಗಳನ್ನ ನೀಡುತ್ತಿದ್ದು, ಅದಕ್ಕೆ ಯಾರೂ ಕಿವಿಗೊಡಬಾರದು ಎಂದರು.
ಓದಿ:ಜೆಡಿಎಸ್ ಆಗಾಗ ನಮ್ಮ ಹತ್ತಿರ ಬರುತ್ತೆ, ದೂರ ಹೋಗುತ್ತೆ: ಸಿ.ಟಿ.ರವಿ
ಇನ್ನು, ನಮ್ಮ ಜಿಲ್ಲೆಯವರು ತುಂಬಾ ಒಳ್ಳೆಯವರಾಗಿದ್ದು, ಹೂಡಿಕೆದಾರರಿಗೆ ಹಾಗೂ ಕಂಪನಿಗಳಿಗೆ ನಾವು ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದರು.