ಕರ್ನಾಟಕ

karnataka

ETV Bharat / state

ಟಿಕೆಟ್​ಗಾಗಿ ಬೀದಿಯಲ್ಲಿ ಗಲಾಟೆ ಮಾಡೋದು ಸರಿಯಲ್ಲ: ಬಚ್ಚೇಗೌಡ-ಎಂಟಿಬಿಗೆ ಮುನಿಸ್ವಾಮಿ ಕಿವಿಮಾತು - ಟಿಕೇಟ್​ಗಾಗಿ ಬೀದಿಯಲ್ಲಿ ಗಲಾಟೆ ಮಾಡೋದು ಎಷ್ಟು ಸರಿ

ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಅವರನ್ನು ರಮೇಶ್ ಕುಮಾರ್ ಹದ್ದಾಗಿ ಕುಕ್ಕಿದ್ದಾರೆ ಅಂತ ನಿನ್ನೆ ಮಾಜಿ ಸಿಎಂ ಕುಮಾರಸ್ವಾಮಿ ನೀಡಿರೋ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದ ಮುನಿಸ್ವಾಮಿ ಕುಮಾರಣ್ಣ ಯಾವ ಅಥ೯ದಲ್ಲಿ ಇದನ್ನು ಹೇಳಿದ್ರೋ ನನಗೆ ಗೊತ್ತಿಲ್ಲ ಆದ್ರೇ ಹದ್ದಾಗಿ ಯಾರು ಯಾರನ್ನು ಕುಕ್ಕಿದ್ದಾರೆ, ಅವರು ಅವರನ್ನೇ ಕುಕ್ಕಿ ಕೊಳ್ತಿದ್ದಾರೆ ಅನ್ನೋದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಎಸ್.ಮುನಿಸ್ವಾಮಿ

By

Published : Sep 24, 2019, 5:00 PM IST

ಕೋಲಾರ:ಸಂಸದ ಬಚ್ಚೇಗೌಡ ಅವ್ರೂ ಬಿಜೆಪಿ ಪಕ್ಷದಿಂದ ಆಯ್ಕೆ ಆಗಿದ್ದಾರೆ, ಎಂಟಿಬಿ ನಾಗರಾಜ್ ಹಾಗೂ ಬಚ್ಚೇಗೌಡ ಇಬ್ಬರೂ ಸಹ ವರಿಷ್ಟರ ಮುಂದೆ ಕೂತು ಹೊಸಕೋಟೆ ಟಿಕೆಟ್ ವಿಚಾರವಾಗಿ ಮೊದಲೇ ಒಪ್ಪಿಕೊಂಡಿದ್ದಾರೆ. ಆದ್ರೇ ಈಗ ಉಪ ಚುನಾವಣೆಯಲ್ಲಿ ಸ್ಪಧಿ೯ಸಲು ಟಿಕೆಟ್ ಗಾಗಿ ಬೀದಿಯಲ್ಲಿ ಗಲಾಟೆ ಮಾಡೋದು ಎಷ್ಟು ಮಾತ್ರ ಸರಿ ಎಂದು ಕೋಲಾರದಲ್ಲಿ ಸಂಸದ ಎಸ್.ಮುನಿಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಎಸ್.ಮುನಿಸ್ವಾಮಿ

ಸಂಸದ ಬಚ್ಚೇಗೌಡ ಅವರ ಪುತ್ರ ಶರತ್ ಬಚ್ಚೇಗೌಡ ಅವರಿಗೆ ಟಿಕೆಟ್ ಕೊಡುವ ವಿಚಾರ ಪಕ್ಷದ ಹೈಕಮಾಂಡ್ ತೀಮಾ೯ನಿಸುತ್ತೆ, ಸಂಸದ ಬಚ್ಚೇಗೌಡ ಅವ್ರೂ ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿಯಾಗಿ, ಈ ರೀತಿ ಬೀದಿಯಲ್ಲಿ ಗಲಾಟೆ ಮಾಡೋದು ಬಿಟ್ಟು ಪಕ್ಷದ ಮುಖಂಡರು ಜೊತೆ ಚಚಿ೯ಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸಂಸದ ಮುನಿಸ್ವಾಮಿ ಕಿವಿ ಮಾತು ಹೇಳಿದ್ದಾರೆ.

ಇನ್ನು ವಿರೋಧ ಪಕ್ಷದ ನಾಯಕರನ್ನೆ ಆಯ್ಕೆ ಮಾಡಲಾಗದ ಕಾಂಗ್ರೆಸ್ ಪಕ್ಷ ಈಗ ಶರತ್ ಬಚ್ಚೇಗೌಡರಿಗೆ ಆಮಿಷವೊಡ್ಡಿದೆ. ಆದರೆ ಯಾವುದೇ ಕಾರಣಕ್ಕೂ ನಾವು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಹೋಗಲು ಬಿಡೋದಿಲ್ಲ ಎಂದರು.

ಇನ್ನು ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಅವರನ್ನು ರಮೇಶ್ ಕುಮಾರ್ ಹದ್ದಾಗಿ ಕುಕ್ಕಿದಾರೆ ಅಂತ ನಿನ್ನೆ ಮಾಜಿ ಸಿಎಂ ಕುಮಾರಸ್ವಾಮಿ ನೀಡಿರೋ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದ ಮುನಿಸ್ವಾಮಿ ಕುಮಾರಣ್ಣ ಯಾವ ಅಥ೯ದಲ್ಲಿ ಇದನ್ನು ಹೇಳಿದ್ರೋ ನನಗೆ ಗೊತ್ತಿಲ್ಲ ಆದ್ರೇ ಹದ್ದಾಗಿ ಯಾರು ಯಾರನ್ನು ಕುಕ್ಕಿದ್ದಾರೆ, ಅವರು ಅವರನ್ನೇ ಕುಕ್ಕಿ ಕೊಳ್ತಿದ್ದಾರೆ ಅನ್ನೋದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ನೀಡಿದ್ರು.

ABOUT THE AUTHOR

...view details