ಕರ್ನಾಟಕ

karnataka

ETV Bharat / state

ಜಡಿ ಮಳೆಗೆ ಮಲೆನಾಡಾದ ಬರದ ನಾಡು ಕೋಲಾರ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಗಡಿ ಜಿಲ್ಲೆ ಕೋಲಾರ ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಜಡಿ ಮಳೆಯಾಗಿ ಬರದ ನಾಡು ಕೋಲಾರ ಮಲೆನಾಡಿನಂತಾಗಿದೆ.

mountain to slow rain kolar is a land that does not come
ಜಡಿ ಮಳೆಗೆ ಮಲೆನಾಡಾದ ಬರದ ನಾಡು ಕೋಲಾರ

By

Published : Nov 12, 2022, 5:26 PM IST

Updated : Nov 12, 2022, 5:46 PM IST

ಕೋಲಾರ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಗಡಿ ಜಿಲ್ಲೆ ಕೋಲಾರ ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಜಡಿ ಮಳೆಯಾಗಿದೆ. ಕೋಲಾರದಲ್ಲಿ ಜಡಿ ಮಳೆಯಿಂದಾಗಿ ಬರದ ನಾಡು ಕೋಲಾರ ಮಲೆನಾಡಿನಂತಾಗಿದೆ.

ಈ ಬಾರಿ ನಿರೀಕ್ಷೆಗೂ ಮೀರಿ ಮಳೆಯಾದ ಹಿನ್ನೆಲೆ ಎಲ್ಲೆಡೆ ಕೆರೆಕುಂಟೆಗಳು ತುಂಬಿ ಹರಿಯುತ್ತಿವೆ. ರಾಗಿ ಸೇರಿದಂತೆ ದ್ವಿದಳ ಧಾನ್ಯಗಳ ಬೆಳೆಗಳು ಕೊಯ್ಲಿಗೆ ಬಂದಿದ್ದು ಇನ್ನೂ 2 ದಿನ ಸಾಧಾರಣ ಮಳೆಯಾಗುವ ಸಾಧ್ಯತೆ ಇರುವುದರಿಂದ ಕೈಗೆ ಬಂದ ರಾಗಿ ಬೆಳೆ ಮಣ್ಣು ಪಾಲಾಗುವ ಆತಂಕವಿದ್ದು, ಜಿಲ್ಲೆಯ ರೈತರನ್ನು ಕಂಗಾಲಾಗಿಸಿದೆ. ಇನ್ನೂ ಜಡಿ ಮಳೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಸವಾರರು ಪರದಾಡುವಂತಾಗಿದೆ.

ಜಡಿ ಮಳೆಗೆ ಮಲೆನಾಡಾದ ಬರದ ನಾಡು ಕೋಲಾರ

ಮಳೆಯ ಸಿಂಚನದಿಂದ ಚಳಿಯೂ ಹೆಚ್ಚಾಗಿ ಬೆಚ್ವನೆಯ ಉಡುಪುಗಳ ಮೊರೆ ಹೋಗಿರುವ ಜನರು ಸ್ವೆಟರ್ ಹಾಗೂ ಜರ್ಕಿನ್ ಮೂಲಕ ಚಳಿಯಿಂದ ರಕ್ಷಣೆ ಪಡೆದುಕೊಳ್ಳುತ್ತಿದ್ದಾರೆ. ಶೀತ ಗಾಳಿ ಅರೋಗ್ಯದ ಮೇಲೆ ಪ್ರಭಾವ ಬೀರುವ ಆತಂಕವಿದೆ.

ಇದನ್ನೂ ಓದಿ:ಮೈಸೂರಿನಲ್ಲಿ ಜಿಟಿಜಿಟಿ ಮಳೆ: ವಾಹನ ಸವಾರರ ಪರದಾಟ

Last Updated : Nov 12, 2022, 5:46 PM IST

ABOUT THE AUTHOR

...view details