ಕರ್ನಾಟಕ

karnataka

ETV Bharat / state

ಕೋಲಾರ: ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ - ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಶರಣಾದ ಘಟನೆ ಕೋಲಾರದಲ್ಲಿ ನಡೆದಿದೆ.

mother-committed-suicide-along-with-children-in-kolar
ಕೋಲಾರ : ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

By

Published : Jun 20, 2023, 9:11 PM IST

Updated : Jun 21, 2023, 8:11 PM IST

ಪ್ರಕರಣದ ಬಗ್ಗೆ ಎಸ್​ಪಿ ಮಾಹಿತಿ

ಕೋಲಾರ: ಡೆತ್​ ನೋಟ್​ ಬರೆದು ತನ್ನಿಬ್ಬರು ಮಕ್ಕಳೊಂದಿಗೆ ತಾಯಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ತಾಲೂಕಿನ ಉಪ್ಪುಕುಂಟೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಮೃತರನ್ನು ಸುಗುಣ (26), ಮಕ್ಕಳಾದ ಪ್ರೀತಂ ಗೌಡ (9) ಮತ್ತು ನಿಶಿತಾ ಗೌಡ ಎಂದು ಗುರುತಿಸಲಾಗಿದೆ. ಮಹಿಳೆಯ ಪತಿ ಹಾಗೂ ಮನೆಯವರ ಕಿರುಕುಳವೇ ಕಾರಣ ಎಂಬ ಆರೋಪ ಕೇಳಿಬಂದಿದೆ.

ಸುಗುಣ ಅವರು ಮುರಳಿ ಎಂಬವರನ್ನು ಮದುವೆಯಾಗಿದ್ದರು. ಇಬ್ಬರು ಸರ್ಕಾರಿ ಬಸ್​ ಡಿಪೋದಲ್ಲಿ ಕೆಲಸ ಮಾಡುತ್ತಿದ್ದರು. ಮುರಳಿ ಸರ್ಕಾರಿ ಬಸ್ ಡಿಪೋದಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದರೆ, ಸುಗುಣ ಮೆಕಾನಿಕ್ ಕೆಲಸ ಮಾಡುತ್ತಿದ್ದರು. ಆತ್ಮಹತ್ಯೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕೋಲಾರ ಎಸ್​ಪಿ ನಾರಾಯಣ, ''ಮಹಿಳೆ ಸುಗುಣ ತನ್ನ ಇಬ್ಬರು ಮಕ್ಕಳೊಂದಿಗೆ ಅತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಿರುಕುಳವೇ ಸಾವಿಗೆ ಕಾರಣ ಎಂದು ಡೆತ್​ನೋಟ್ ಬರೆದು ತನ್ನ ತಮ್ಮ ನಿಖಿತ್​​ಗೆ ಮೆಸೇಜ್ ಮಾಡಿದ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪ್ರಕರಣದ ಸಂಬಂಧ ಪತಿ ಮುರಳಿ ಸೇರಿದಂತೆ 6 ಜನರ ವಿರುದ್ದ ಪ್ರಕರಣ ದಾಖಲಾಗಿದೆ. ಅದರಂತೆ ಮೃತಳ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಗಂಡ ಮುರಳಿ, ಆತನ ತಾಯಿ ಶಾಂತಮ್ಮ ಹಾಗೂ ಗಂಡನ ಇಬ್ಬರು ತಂಗಿಯರು ಹಾಗೂ ಬಾವಂದಿರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಇಬ್ಬರು ಮಕ್ಕಳನ್ನ ಕೊಂದ ಹಿನ್ನಲೆ ಸುಗುಣ ವಿರುದ್ದ ಸೆಕ್ಷನ್ 302 ರಡಿ ಪ್ರಕರಣ ದಾಖಲಾಗಿದ್ದು, ಡೆತ್ ನೋಟ್ ಆಧರಿಸಿ 6 ಜನರ ವಿರುದ್ಧ ಸೆಕ್ಷನ್ 306ರ ಅಡಿಯಲ್ಲಿ ದೂರು ದಾಖಲಾಗಿದೆ'' ಎಂದು ತಿಳಿಸಿದ್ದಾರೆ.

ಕಲಬುರಗಿಯಲ್ಲಿ ಇಬ್ಬರು ಮಕ್ಕಳೊಂದಿಗೆ ತಂದೆ ಆತ್ಮಹತ್ಯೆ: ಇಬ್ಬರು ಮಕ್ಕಳೊಂದಿಗೆ ತಂದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕುಂಚಾವರಂ ಗ್ರಾಮದ ಬಳಿ ಪೋಚಾವರಂದಲ್ಲಿ ನಡೆದಿತ್ತು. ಮೃತರನ್ನು ಚಿಂಚೋಳಿ ತಾಲೂಕು ಕುಂಚಾವರಂ ಗ್ರಾಮದ ಹಾಗೂ ಸದ್ಯ ತೆಲಂಗಾಣದಲ್ಲಿ ವಾಸವಾಗಿದ್ದ ಹಣಮಂತ ವಡ್ಡರ್ (40) ಹಾಗೂ ಆತನ ಪುತ್ರ ಓಂಕಾರ (9), ಪುತ್ರಿ ಅಕ್ಷರಾ (6) ಎಂದು ಗುರುತಿಸಲಾಗಿತ್ತು.

ಮೃತ ಹಣಮಂತ ಕಳೆದ ಕೆಲವು ವರ್ಷಗಳಿಂದ ತೆಲಂಗಾಣ ರಾಜ್ಯದ ತಾಂಡೂರಿನಲ್ಲಿ ವಾಸವಿದ್ದರು. ಆದರೆ ಇತ್ತೀಚೆಗೆ ಹಣಮಂತ ತನ್ನ ಮಕ್ಕಳೊಂದಿಗೆ ಕುಂಚಾವರಂ ಗ್ರಾಮಕ್ಕೆ ಬಂದಿದ್ದರು. ಈ ನಡುವೆ ಶುಕ್ರವಾರ ತನ್ನ ಸಹೋದರನಿಗೆ ಗೋಪಾಲ ಎಂಬವರಿಗೆ ಕರೆ ಮಾಡಿ, ನಾನು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಶವಗಳ ಅಂತ್ಯಕ್ರಿಯೆ ಮಾಡಿ ಎಂದು ಹೇಳಿದ್ದರಂತೆ. ಇದರಿಂದ ಗಾಬರಿಗೊಂಡ ಸಹೋದರ ಗೋಪಾಲ ಹಾಗೂ ಕುಟುಂಬಸ್ಥರು ಹಣಮಂತ ಅವರನ್ನು ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಅಲ್ಲದೆ ಕುಂಚಾವರಂ ಪೊಲೀಸರು ಮತ್ತು ತೆಲಂಗಾಣ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ :ರೈಲಿನ ಶೌಚಾಲಯದಲ್ಲಿ ವ್ಯಕ್ತಿ ಆತ್ಮಹತ್ಯೆ.. ರೈಲ್ವೆ ಹಳಿ ಮೇಲೆ ಅಪರಿಚಿತ ಶವ ಪತ್ತೆ

Last Updated : Jun 21, 2023, 8:11 PM IST

ABOUT THE AUTHOR

...view details