ಕೋಲಾರ :ಜಿಲ್ಲೆಯ ಕೆಜಿಎಫ್ ಪೊಲೀಸರ ಕಾರ್ಯಾಚರಣೆಯಲ್ಲಿ ಲಾಕ್‌ಡೌನ್ ಉಲ್ಲಂಘಿಸಿರುವ ವಾಹನ ಸವಾರರರಿಂದ ಸುಮಾರು ನಾಲ್ಕೂವರೆ ಲಕ್ಷ ದಂಡ ವಸೂಲಿ ಮಾಡಲಾಗಿದೆ. ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್ಡೌನ್ಗೆ ಸರ್ಕಾರಗಳು ಆದೇಶಿಸಿದ್ದರೂ ಉಲ್ಲಂಘಿಸಿ ಸಂಚಾರ ಮಾಡುತ್ತಿದ್ದ ವಾಹನ ಸವಾರರಿಂದ ಪೊಲೀಸರು 4 ಲಕ್ಷ 37 ಸಾವಿರದ 300 ರೂ. ದಂಡ ವಸೂಲಿ ಮಾಡಿದ್ದಾರೆ.
ಲಾಕ್‌ಡೌನ್ ಉಲ್ಲಂಘಿಸಿದವರಿಂದ ₹4.37 ಲಕ್ಷ ದಂಡ ವಸೂಲಿ! - ಲಾಕ್ ಡೌನ್ ಉಲ್ಲಂಘನೆ
ಸುಮಾರು 1326 ವಾಹನ ಸವಾರರಿಂದ ದಂಡ ವಸೂಲಿ ಮಾಡಲಾಗಿದೆ. 120 ವಾಹನಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ ನಿಷೇಧಾಜ್ಞೆ ಉಲ್ಲಂಘನೆ ಮಾಡಿದ 11 ಮಂದಿಯ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.
![ಲಾಕ್‌ಡೌನ್ ಉಲ್ಲಂಘಿಸಿದವರಿಂದ ₹4.37 ಲಕ್ಷ ದಂಡ ವಸೂಲಿ! police](https://etvbharatimages.akamaized.net/etvbharat/prod-images/768-512-6656891-680-6656891-1585986660832.jpg)
police
ನಾಲ್ಕೂವರೆ ಲಕ್ಷ ದಂಡ ವಸೂಲಿ
ಸುಮಾರು 1326 ವಾಹನ ಸವಾರರಿಂದ ದಂಡ ವಸೂಲಿ ಮಾಡಲಾಗಿದೆ. 120 ವಾಹನಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ ನಿಷೇಧಾಜ್ಞೆ ಉಲ್ಲಂಘನೆ ಮಾಡಿದ 11 ಮಂದಿಯ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಅದರಂತೆ ಕೋಲಾರದ ನಗರ ಠಾಣಾ ಪೊಲೀಸರ ಕಾರ್ಯಾಚರಣೆಯಲ್ಲಿ ಸುಮಾರು 400 ಬೈಕ್ ವಶಪಡಿಸಿಕೊಳ್ಳುವುದರ ಮೂಲಕ ಕೊರೊನಾ ಸೋಂಕು ತಡೆ ನಿಟ್ಟಿನಲ್ಲಿ ರಸ್ತೆಯಲ್ಲಿ ಅನಾವಶ್ಯಕ ಸಂಚರಿಸುವ ಬೈಕ್ ಸವಾರರಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ.
Last Updated : Apr 4, 2020, 3:03 PM IST