ಕರ್ನಾಟಕ

karnataka

ETV Bharat / state

ಕೋಲಾರ: ದಾಖಲೆಯಿಲ್ಲದ ಕಂತೆ ಕಂತೆ ಹಣ ವಶಕ್ಕೆ - ಭರ್ಜರಿ ಕಾರ್ಯಾಚರಣೆ

ದಾಖಲೆಯಿಲ್ಲದೇ ಸಂಗ್ರಹಿಸಿದ್ದ 4 ಕೋಟಿಗೂ ಅಧಿಕ ಹಣವನ್ನು ಕೆ.ಜಿ.ಎಫ್ ಪೊಲೀಸರು ಭರ್ಜರಿ ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆದಿದ್ದಾರೆ.

4 crores and 5 lakhs of rupees seized
ದಾಖಲೆಯಿಲ್ಲದೇ ಸಂಗ್ರಹಿಸಿದ್ದ 4 ಕೋಟಿ 5 ಲಕ್ಷ ರೂಪಾಯಿ ವಶಕ್ಕೆ

By

Published : May 4, 2023, 9:51 PM IST

ಕೋಲಾರ:ಕೆ.ಜಿ.ಎಫ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ದಾಖಲೆಯಿಲ್ಲದೇ ಸಂಗ್ರಹಿಸಿಡಲಾಗಿದ್ದ 4 ಕೋಟಿಗೂ ಹೆಚ್ಚು ಹಣವನ್ನು ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಹಂಚಾಳ ಬಳಿ ಇರುವ ಜಿಯೋನ್ ಹಿಲ್ಸ್ ಗಾಲ್ಫ್ ರೆಸಾರ್ಟ್‌ನ ವಿಲ್ಲಾ ಇರಿಸಿದ್ದ ಕಂತೆ ಕಂತೆ ಹಣವನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ ಅನ್ನುವವರಿಗೆ ಸೇರಿದ ವಿಲ್ಲಾ ಇದಾಗಿದ್ದು, ಖಚಿತ ಮಾಹಿತಿ ಮೇರೆಗೆ ಕೆಜಿಎಫ್ ಎಸ್ಪಿ ಧರಣಿದೇವಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಇದನ್ನೂ ಓದಿ:10 ಸಾವಿರ ರೂಪಾಯಿಗಾಗಿ ಜಗಳ.. ಹೈಕೋರ್ಟ್​ ಬಳಿ ಬರ್ಬರ ಕೊಲೆ

ಜಿಯೋನ್ ಹಿಲ್ಸ್ ಗಾಲ್ಫ್ ರೆಸಾರ್ಟ್ 279 ನಂಬರ್ ವಿಲ್ಲಾದಲ್ಲಿ ಪತ್ತೆಯಾದ ಹಣವನ್ನು ದಾಖಲೆಯಿಲ್ಲದೇ ಸಂಗ್ರಹಿಸಿದ್ದು, ಬಂಗಾರಪೇಟೆ ಪಂಚಾಯತಿ ಹೆಸರು ಬರೆದು ಬಂಡಲ್ ಅನ್ನು ಕಟ್ಟಿ ಇಟ್ಟಿದ್ದ ಹಣ ಇದಾಗಿದೆ. ಕೆಜಿಎಫ್ ಎಸ್ಪಿ ಧರಣಿದೇವಿ ನೇತೃತ್ವದಲ್ಲಿ ನಡೆದ ದಾಳಿ ವಿಚಾರ ತಿಳಿಯುತ್ತಿದ್ದಂತೆ, ಕಾರ್ ಅಲ್ಲೇ ಬಿಟ್ಟು ಮಾಲೀಕ ರಮೇಶ್ ಪರಾರಿಯಾಗಿದ್ದಾರೆ. ಮೊದಲಿಗೆ ವಿಲ್ಲಾದಲ್ಲಿದ್ದ 2 ಕೋಟಿ 54 ಲಕ್ಷ ಹಾಗೂ ಕಾರ್‌ನ ಬೀಗ ಒಡೆದ ವೇಳೆ, ಕಾರ್​ನೊಳಗೆ ಮೂರು ಗೋಣಿ ಚೀಲದಲ್ಲಿದ್ದ ಒಂದೂವರೆ ಕೋಟಿ ಹಣ ಇರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಬೇರೆ ವ್ಯಕ್ತಿಯೊಂದಿಗೆ ಲಿವ್​ ಇನ್​ ರಿಲೇಶನ್​ಶಿಪ್... ಆರೋಗ್ಯ ತಪಾಸಣೆಗೆ ಬಂದ ಗರ್ಭಿಣಿ ಪತ್ನಿಯ ಕೊಂದ ಪತಿ

ಸ್ಥಳದಲ್ಲಿ ಚುನಾವಣಾ ವೀಕ್ಷಕರ ತಂಡ ಮೊಕ್ಕಾಂ ಹೂಡಿದ್ದು, ಹಣವನ್ನು ಮಷಿನ್ ಮೂಲಕ ಲೆಕ್ಕ ಹಾಕಲಾಗಿದೆ. ಚುನಾವಣಾ ಲೆಕ್ಕ ವೀಕ್ಷಕರು, ತಾಲ್ಲೂಕು ಚುನಾವಣಾಧಿಕಾರಿಗಳು, ಐಟಿ ಅಧಿಕಾರಿಗಳ ಸಮ್ಮುಖದಲ್ಲಿ ಹಣವನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ:ಮಾಜಿ ಸಚಿವ ವಿನಯ್ ಕುಲಕರ್ಣಿ ಆಪ್ತನ ನಿವಾಸದ ಮೇಲೆ ಐಟಿ ದಾಳಿ

ABOUT THE AUTHOR

...view details