ಕೋಲಾರ :ಏಹ್.. ಹೋಯ್.. ನಮ್ಮ ಎಂಎಲ್ಎ ಬಗ್ಗೆ ಮಾತಾಡ್ತಿಯಾ, ಆ ಯೋಜನೆ ತಂದಿದ್ದು ನಾನು, ಈ ಯೋಜನೆಯಲ್ಲಿ ನಿಮ್ಮದೇನು ಪಾತ್ರ ಇಲ್ಲ, ಸಭೆಗೆ ಆಹ್ವಾನವಿಲ್ಲದೇ ಸಭೆಗೆ ಬಂದಿದ್ದೀರಾ ಹೀಗೆ ಹಾಲಿ ಮತ್ತು ಮಾಜಿ ಶಾಸಕರುಗಳ ನಡುವೆ ವಾದ - ಪ್ರತಿವಾದ ನಡೆಯುತ್ತಿದ್ರೆ, ಅಲ್ಲೇ ಅವರ ಬೆಂಬಲಿಗರ ನಡುವೆ ಮಾರಾಮಾರಿ ಸಹ ನಡೆಯಿತು. ಅಂದ ಹಾಗೆ ಈ ಮಾರಾಮಾರಿ ದೃಶಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದಲ್ಲಿ.
ಹೌದು ಇವತ್ತು ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯನ್ನು ಟಿಎಪಿಸಿಎಂಎಸ್ ಆವರಣದಲ್ಲಿ ಕರೆಯಲಾಗಿತ್ತು. ಈ ಸಭೆಯಲ್ಲಿ ಹಾಜರಿದ್ದ ಹಾಲಿ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಹಾಗೂ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ನಡುವೆ ಭಾಷಣ ಮಾಡುವ ವೇಳೆ ವೇದಿಕೆಯಲ್ಲಿ ಹಾಲಿ ಮತ್ತು ಮಾಜಿ ಶಾಸಕರ ನಡುವೆ ಜಟಾಪಟಿಗೆ ಕಾರಣವಾಯ್ತು.