ಕೋಲಾರ: ಎಲ್ಲೆಡೆ ಕೊರೊನಾ ಆತಂಕ ಹೆಚ್ಚಾಗಿರುವ ಹಿನ್ನಲೆ ಕೋಲಾರದಲ್ಲಿ ಶಾಸಕರೊಬ್ಬರು ರೋಡಿಗಿಳಿದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.
ರೋಡಿಗಿಳಿದು ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ ಶಾಸಕ
ಬಂಗಾರಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ರಸ್ತೆ ಬದಿ ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಪಾಠ ಮಾಡುವ ಮೂಲಕ, ಕೊರೋನಾ ವೈರಸ್ ಕುರಿತು ಜಾಗೃತಿ ಮೂಡಿಸಿ, ರಸ್ತೆ ಬದಿ ಇದ್ದ ತರಕಾರಿ ಅಂಗಡಿಗಳು ಸೇರಿದಂತೆ ಇನ್ನಿತರ ಅಂಗಂಡಿಗಳನ್ನ ತೆರವುಗೊಳಿಸಿದ್ದಾರೆ.
ಕೋಲಾರ ಜಿಲ್ಲೆ ಬಂಗಾರಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ರಸ್ತೆ ಬದಿ ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಪಾಠ ಮಾಡುವ ಮೂಲಕ, ಕೊರೋನಾ ವೈರಸ್ ಕುರಿತು ಜಾಗೃತಿಗೊಳಿಸುವುದರೊಂದಿಗೆ, ರಸ್ತೆ ಬದಿ ಇದ್ದ ತರಕಾರಿ ಅಂಗಡಿಗಳು ಸೇರಿದಂತೆ ಇನ್ನಿತರ ಅಂಗಂಡಿಗಳನ್ನ ತೆರವುಗೊಳಿಸಿದರು.
ಇನ್ನು ಸರ್ಕಾರದ ಆದೇಶ ಮೀರಿ ಮಾರುಕಟ್ಟೆಯಲ್ಲಿ ತರೆದಿದ್ದ ಅಂಗಡಿ ಮಾಲೀಕರಿಗೆ ಮತ್ತು ಜನರಿಗೆ ಕಟುವಾಗಿ ತಿಳಿ ಹೇಳಿ, ಅಂಗಡಿಗಳನ್ನ ಬಂದ್ ಮಾಡಿಸಿದರು. ಅಲ್ಲದೆ 21 ದಿನಗಳ ಕಾಲ ಸರ್ಕಾರದ ಆದೇಶ ಪಾಲಿಸುವಂತೆ ಸೂಚನೆ ನೀಡಿದ ಶಾಸಕರು, ಜಿಲ್ಲಾಡಳಿತ ನೀಡುವ ಸಮಯದಲ್ಲಿ ಅಂಗಡಿಗಳ ತೆರೆಯುವ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುಂತೆ ಸೂಚನೆ ನೀಡಿದ್ದಾರೆ. ಇನ್ನು ಅಗ್ನಿ ಶಾಮಕ ದಳದ ವತಿಯಿಂದ ನಗರದೆಲ್ಲೆಡೆ ರಸ್ತೆ ಬದಿಯ ಅಂಗಡಿಗಳಿಗೆ ಕ್ರಿಮಿನಾಶಕ ಹಾಗೂ ಔಷದ ಸಿಂಪಡಣೆ ಮಾಡಿಸಿದ್ರು. ಒಟ್ಟಾರೆ ಅಂಗಡಿಗಳ ಮಾಲೀಕರಿಗೆ ಮತ್ತು ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.