ಕರ್ನಾಟಕ

karnataka

ETV Bharat / state

ಖಾಸಗಿ ಫೈನಾನ್ಸರ್ ಜತೆ ಸೇರಿ ಶಾಲೆಗಳು ಹಣ ವಸೂಲಿಗೆ ಯತ್ನಿಸುತ್ತಿವೆಯಾ?: ಶಿಕ್ಷಣ ಸಚಿವರು ಹೇಳಿದ್ದೇನು? - ಖಾಸಗಿ ಶಾಲೆಗಳ ಶುಲ್ಕ ವಿಚಾರ

ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಕೆಲ ಖಾಸಗಿ ಶಾಲೆಯವರು ಪೋಷಕರನ್ನ ಹಾಗೂ ಫೈನಾನ್ಸ್ ನವರನ್ನ ಶಾಲೆಗೆ ಕರೆಸಿ ಅವರ ಬಳಿ ಸಾಲ ಕೊಡಿಸುತ್ತಿರುವುದು ಗೊತ್ತಾಗಿದೆ. ಇಂತಹ ಯಾವುದೇ ಘಟನೆಗಳಿಗೆ ನಾವು ಅವಕಾಶ ಕೊಡುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

minister suresh kumar
ಸಚಿವ ಸುರೇಶ್ ಕುಮಾರ್

By

Published : Jun 12, 2021, 6:08 PM IST

Updated : Jun 12, 2021, 6:28 PM IST

ಕೋಲಾರ:ಖಾಸಗಿ ಫೈನಾನ್ಸರ್​ಗಳ ಜತೆ ಕೆಲ ಖಾಸಗಿ ಶಾಲೆಗಳು ಶಾಮೀಲಾಗಿ ಪೋಷಕರಿಂದ ಶಾಲಾ ಶುಲ್ಕ ಪಡೆಯಲು ಯತ್ನಿಸುತ್ತಿರುವ ವಿಚಾರಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿ ಬೇಸರ ವ್ಯಕ್ತಪಡಿಸಿದ್ದಾರೆ.

ಕೋಲಾರದ ಸಹ್ಯಾದ್ರಿ ಕಾಲೇಜಿನಲ್ಲಿ ಅನುದಾನರಹಿತ ಶಾಲಾ ಶಿಕ್ಷಕರಿಗೆ ಆಹಾರ ಕಿಟ್ ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ತಾತ್ವಿಕವಾಗಿ ಯಾರೂ ಒಪ್ಪಿಕೊಳ್ಳದಂತ ವಿಚಾರ. ನಾನಂತೂ ಎಲ್ಲೂ ಕೇಳಿರಲಿಲ್ಲ, ಆದ್ರೆ ಹೀಗೆ ನಡೆದಿದೆ, ಇದು ಆಗಬಾರದಾಗಿತ್ತು ಎಂದರು.

ಸಚಿವ ಸುರೇಶ್ ಕುಮಾರ್

ಇಂತಹ ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಕೆಲ ಖಾಸಗಿ ಶಾಲೆಯವರು ಪೋಷಕರನ್ನ ಹಾಗೂ ಹಣಕಾಸು ಸಂಸ್ಥೆಯವರನ್ನು ಶಾಲೆಗೆ ಕರೆಸಿ ಅವರ ಬಳಿ ಸಾಲ ಕೊಡಿಸುತ್ತಿರುವುದು ಗೊತ್ತಾಗಿದೆ. ನಿನ್ನೆ ಮುಖ್ಯಮಂತ್ರಿಗಳಿಗೆ ಈ ವಿಚಾರ ಗೊತ್ತಾಗಿ ಬಹಳ ಖಾರವಾಗಿ ಹೇಳಿದ್ದಾರೆ. ಇಂತಹ ಯಾವುದೇ ಘಟನೆಗಳಿಗೆ ನಾವು ಅವಕಾಶ ಕೊಡುವುದಿಲ್ಲ. ಸಂಬಂಧಪಟ್ಟವರಿಗೆ ನೊಟೀಸ್ ಕೊಡುತ್ತೇವೆ ಎಂದು ಹೇಳಿದ್ರು.

ಇದನ್ನೂ ಓದಿ:ಮಂಡ್ಯದಲ್ಲಿ ಶೀಘ್ರವೇ ಕಬ್ಬು ಸಂಶೋಧನಾ ಕೇಂದ್ರ ಸ್ಥಾಪನೆ : ಬಿ.ಸಿ. ಪಾಟೀಲ

ಇನ್ನೂ ಪೋಷಕರ ಆರ್ಥಿಕ ಪರಿಸ್ಥಿತಿ ಹಾಗೂ ಶಿಕ್ಷಕರಿಗೆ ವೇತನ ಪಾವತಿಯಾಗದಿರುವ ವಿಚಾರ ನಮಗೆ ತಿಳಿದಿದೆ. ಈ ಎರಡು ವಿಚಾರವನ್ನು ಬ್ಯಾಲೆನ್ಸ್​​ ಮಾಡಬೇಕಾಗಿದೆ ಎಂದು ಹೇಳಿದರು. ಅಲ್ಲದೇ ಕಳೆದ ವರ್ಷ ಸರ್ಕಾರ ಜಾರಿ ಮಾಡಿದ ಶೇ.30 ರಷ್ಟು ಶುಲ್ಕ ಆದೇಶವನ್ನ ಒಪ್ಪದ ಒಂದಷ್ಟು ಸಂಘಟನೆಗಳು ಹಾಗೂ ಖಾಸಗಿ ಶಾಲೆಯವರು ಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ವರ್ಷವೂ ಕೂಡ ಇದೆ ಪರಿಸ್ಥಿತಿ ಇದೆ. ಹಾಗಾಗಿ ಶಾಲೆ ಆಡಳಿತ ಮಂಡಳಿ ಹಾಗೂ ಪೋಷಕರೇ ಇದನ್ನ ಬಗೆ ಹರಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದ್ರು.

Last Updated : Jun 12, 2021, 6:28 PM IST

ABOUT THE AUTHOR

...view details